ನನಗೆ ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ, ಪ್ರಶ್ನೆ ಮಾಡಲು ನೀವ್ಯಾರು : CM

ಬೆಂಗಳೂರು : ಸಿದ್ದರಾಮಯ್ಯ ನಿಜವಾದ ಹಿಂದು ಆಗಿದ್ದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದೇಕೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.

ಹಿಂದುಗಳಲ್ಲೇ ಅನೇಕ ಮಂದಿ ಗೋಮಾಂಸ ತಿನ್ನುತ್ತಾರೆ. ನಮ್ಮ ಆಹಾರ ಪದ್ದತಿಯನ್ನು ಪ್ರಶ್ನಿಸಲು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನಗೆ ಗೋಮಾಂಸ ತಿನ್ನಬೇಕೆನಿಸಿರೆ ತಿನ್ನುತ್ತೇನೆ. ಬೇಡ ಎನ್ನಲು ಇವರ್ಯಾರು. ಆದರೆ ನನಗೆ ಬೀಫ್‌ ಇಷ್ಟವಿಲ್ಲ ಆದ್ದರಿಂದ ನಾನು ಅದನ್ನು ತಿನ್ನುವುದಿಲ್ಲ ಎಂದಿದ್ದಾರೆ.

ನನೆ ದನ ಸಾಕಿಯೂ ಗೊತ್ತು, ಅದನ್ನು ಮೇಯಿಸಿಯೂ ಗೊತ್ತು, ಸಗಣಿ ಬಾಚಿದ್ದೂ ಗೊತ್ತು. ಗೋವಿನ ಪಾಲನೆ ಬಗ್ಗೆ ನನಗೆ ಯೋಗಿ ಆದಿತ್ಯನಾಥ್‌ ಪಾಠ ಮಾಡುವ ಅಗತ್ಯವಿಲ್ಲ. ಅವರೇನು ದನ ಸಾಕಿದ್ದಾರಾ ?. ಏನೂ ಗೊತ್ತಿಲ್ಲದ ಗೋರಕ್ಷಣೆ ಬಗ್ಗೆ ಮಾತನಾಡುವ ಹಕ್ಕಾದರೂ ಏನಿದೆ ಎಂದಿದ್ದಾರೆ.

ಕೋಮುಗಲಭೆಯಲ್ಲಿ ಸಾಯುವವರು, ಸಾಯಿಸುವವರು ಹಿಂದುಳಿದ ಹಾಗೂ ದಲಿತ ಸಮುದಾಯದ ಅಮಾಯಕರು. ಅವರ ಕೈಗೆ ಆಯುಧ ಕೊಟ್ಟವರ ಮಕ್ಕಳು, ಡಾಕ್ಟರ್‌, ಇಂಜಿನಿಯರ್ ಆಗಿರುತ್ತಾರೆ. ನಮ್ಮ ಮಕ್ಕಳು ಜೈಲಿಗೆ ಹೋಗುತ್ತಿದ್ದಾರೆ, ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಕೋಮುಗಲಭೆ ನಿಲ್ಲುತ್ತದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಈ ಟ್ವೀಟ್‌ಗೆ ಬಿಜೆಪಿ ನಾಯಕ ಡಿ.ವಿ ಸದಾನಂದಗೌಡ ತಿರುಗೇಟು ನೀಡಿದ್ದು. ನೀವು ಏನು ಬೇಕಾದರೂ ತಿನ್ನಿ ಅದು ನಿಮಗೆ ಬಿಟ್ಟಿದ್ದು, ಆದರೆ ಹಿಂದುಗಳು ಪೂಜಿಸುವ ಗೋವುಗಳನ್ನು ಹತ್ಯೆ ಮಾಡುವುದನ್ನು ನಿಲ್ಲಿಸಿ. ಹಿಂದುಗಳು ತುಂಬಾ ಜನ ಬೀಫ್‌ ತಿನ್ನುತ್ತಾರೆ ಎಂದು ಹೇಳಿ ಯಾರನ್ನು ಓಲೈಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com