ಗೋಮಾಂಸ ಮಾತ್ರವಲ್ಲ, ಅವನು ತಿನ್ನದೇ ಇರೋದಾದ್ರು ಏನಿದೆ : CM ಗೆ BSY ಟಾಂಗ್‌

ಚಿತ್ರದುರ್ಗ: ನಾನು ಹಿಂದು ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗುತ್ತಾರೆ. ಇವರೆಂಥಾ ಹಿಂದು ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪರವಾಗಿ ನಿಲ್ಲುವ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿಲ್ಲ. ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ದಲಿತರ ವಿಜಯಪುರ ಚಲೋ ತಡೆಯುವುದು ತಪ್ಪು. ನಾವು ಧರ್ಮವನ್ನು ಮುಂದಿಟ್ಟುಕೊಂಡು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ಜನರ ಸಾಮಾಜಿಕ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಯಾತ್ರೆ ನಡೆಸುತ್ತಿದ್ದೇವೆ. ಸಿದ್ದರಾಮಯ್ಯ ತಲೆತಿರುಕ, ಹುಚ್ಚನಂತೆ ಮಾತನಾಡುತ್ತಾನೆ, ಯೋಗಿ ಆದಿತ್ಯನಾಥ್ ಬಗ್ಗೆ ಮಾತನಾಡಲು ಅವನಿಗೆ ನೈತಿಕತೆ ಇಲ್ಲ. ಗೋಮಾಂಸ ಮಾತ್ರವಲ್ಲ, ಅವನು ತಿನ್ನದೆ ಇರುವುದು ಏನಿದೆ ಎಂದು‌ ಸಿದ್ದರಾಮಯ್ಯ ವಿರುದ್ದ ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ನನ್ನನ್ನು ಜೈಲಿಗೆ ಹೋಗಿ ಬಂದವನು ಎಂದು ಹೇಳಿದ್ದೇ ಹೇಳಿದರೆ ಜನ ಬಡಿಗೆ ತೆಗೆದುಕೊಳ್ಳುತ್ತಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ನಾವು ಜವಬ್ದಾರರಲ್ಲ. ಎಲುಬಿಲ್ಲದ ನಾಲಿಗೆ ನೀಚ ಬುದ್ದಿಬಿಡಬೇಕು ಎಂದಿದ್ದಾರೆ.

One thought on “ಗೋಮಾಂಸ ಮಾತ್ರವಲ್ಲ, ಅವನು ತಿನ್ನದೇ ಇರೋದಾದ್ರು ಏನಿದೆ : CM ಗೆ BSY ಟಾಂಗ್‌

  • January 9, 2018 at 3:24 PM
    Permalink

    ಯಡಿಯೂರಪ್ಪನಿಗೆ ತಾಕತ್ತು ಇದ್ದರೆ ಮಾಂಸ ಮೀನು ತಿನ್ನುವವರ ವೋಟ್ ಬೇಡ ಎನ್ನಲಿ

    Reply

Leave a Reply

Your email address will not be published.