ಧನ್ಯಶ್ರೀ ಆತ್ಮಹತ್ಯೆಗೆ Twist : ಬೆದರಿಕೆ ಹಾಕಿದ್ದು ಬೆಳ್ತಂಗಡಿ ಭಜರಂಗ ದಳದವರಂತೆ !

ಚಿಕ್ಕಮಗಳೂರು : ಧನ್ಯಶ್ರೀ ಸಾವಿನ ಕುರಿತ ಸತ್ಯ ಬಹಿರಂಗವಾಗಿದೆ. ನೈತಿಕ ಪೊಲೀಸ್‌ಗಿರಿಯಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಧನ್ಯಶ್ರೀ ತಾಯಿ ಹೇಳಿದ್ದಾರೆ.

ಹಿಂದೂಪರ ಸಂಘಟನೆಗಳ ಹೆಸರಿನಲ್ಲಿ ಕರೆ ಬಂದಿದ್ದು ನಿಜ ಎಂದು 15 ನಿಮಿಷ ಆಡಿಯೋದಲ್ಲಿ ಧನ್ಯಶ್ರೀ ತಾಯಿ ಸರಸ್ವತಿ ಮಾತನಾಡಿದ್ದಾರೆ. ಹಿಂದೂ ಪರ ಸಂಘಟನೆಗಳು ನನಗೆ ಬೆದರಿಕೆ ಹಾಕಿದ್ದು ನಿಜ. ಆದರೆ ಧಮ್ಕಿ ಹಾಕಿರುವುದು ಮೂಡಿಗೆರೆ ಭಜರಂಗದಳದವರಲ್ಲ. ಬೆಳ್ತಂಗಡಿ ಭಜರಂಗದಳದವರು. ನನ್ನ ಮಗಲು ಡೆತ್‌ನೋಟ್‌ನಲ್ಲಿ ಎಲ್ಲವನ್ನೂ ಬರೆದಿರುವುದಾಗಿ ಹೇಳಿದ್ದಾರೆ.

ಭಜರಂಗಳದವರು ಎಂದು ಹೇಳಿಕೊಂಡು ನನ್ನ ಗಂಡನ ಮೊಬೈಲ್‌ಗೆ ಕರೆ ಮಾಡಿದ್ದರು. ನಾನು ರಿಸೀವ್ ಮಾಡಿ ನಿನ್ನೆಯಿಂದ ಕರೆ ಮಾಡುತ್ತಿದ್ದೀರಲ್ಲ ನೀವ್ಯಾರು ಅಂದೆ ಅದಕ್ಕೆ ಆತ ನಾನು ಬೆಳ್ತಂಗಡಿಯಿಂದ. ನೀವು ಧನ್ಯಾ ತಾಯಿನಾ ಎಂದರು. ನಾನು ಹೌದು ಎಂದೆ. ನಾನು ಭಜರಂಗದಳದವನು. ನಿಮ್ಮ ಮಗಳನ್ನು ಏನು ಮುಸ್ಲಿಂಗೆ ಸಹಾಯ ಮಾಡೋಕೆ ಬಿಡ್ತಿದ್ದೀರಾ ಎಂದು ಕೇಳಿದ. ಅದಕ್ಕೆ ನನ್ನ ಮಗಳು ಆ ರೀತಿಯ ಹುಡುಗಿಯಲ್ಲ, ಅವಳು ಏನು, ಹೇಗೆ ಎಂದು ನನಗೆ ಗೊತ್ತು ಎಂದೆ. ಅದಕ್ಕೆ ಆತ ನೋಡಿ ನಿಮ್ಮ ಕಾಲು ಹಿಡಿಯುತ್ತೀನಿ, ಮುಸ್ಲಿಂಗಳಿಗೆ ಸಪೋರ್ಟ್‌ ಮಾಡಬೇಡಿ ಎಂದ.

ಮಗಳು ಕಾಲೇಜಿನಿಂದ ಬಂದ ಬಳಿಕ ಆಕೆಗೆ ನೀನು ವಾಟ್ಸಾಪ್‌ನಲ್ಲಿ ಫೋಟೋ ಹಾಕಿದ್ದೀಯ ಎಂದು ಕೇಳಿದೆ. ಅದಕ್ಕೆ ಅವಳು ನಿನಗೆ ತೋರಿಸಿದೆ ಅಲ್ವಾ ಕಣ್ಣಿನ ಡಿಪಿ ಹಾಕಿದ್ದೆ ಎಂದಳು. ಮತ್ತೆ ಅದೇ ನಂಬರ್‌ನಿಂದ ಕರೆ ಬರುತ್ತಿತ್ತು. ಬಳಿಕ ನನ್ನ ಗಂಡನಿಗೆ ಹೆದರಿಸಿ ಬೈಯುತ್ತಿದ್ದನಂತೆ. ಮುಸ್ಲಿಂ ಹುಡುಗರಿಗೆ ಏಕೆ ಮದುವೆ ಮಾಡಿಕೊಡುತ್ತೀರಿ. ನಿಮಗೆ ಹಿಂದು ಹುಡುಗರು ಸಿಕ್ಕಿಲ್ವ ಎಂದು ಹೇಳಿದ್ದನಂತೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com