ಏ ಅಧ್ಯಕ್ಷ…ಚಮಚಾ ನಿಂತ್ಕೊಳೋ…ಪರಮೇಶ್ವರ್ ವಿರುದ್ದ ವೈಜನಾಥ್ ಕೆಂಡಾಮಂಡಲ
ಬೆಂಗಳೂರು : ಏಯ್ ಅಧ್ಯಕ್ಷ ನಿಂತ್ಕೊಳೋ…ಏ ಚಮಚಾ ನಿಂತ್ಕೊಳೋ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ದ ಮಾಜಿ ಶಾಸಕ ವೈಜನಾಥ್ ಪಾಟೀಲ್ ಬಿರುನುಡಿಯಾಡಿದ್ದಾರೆ. ನನ್ನ ಮಗ ವಿಕ್ರಂ ಪಾಟೀಲ್ಗೆ ಟಿಕೆಟ್ ಕೇಳಿದ್ರೆ ಕೊಡಲ್ಲ, ಧರಂಸಿಂಗ್, ಖರ್ಗೆ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡ್ತಾರೆ ಎಂದು ಕಿಡಿಕಾರಿದ್ದಾರೆ.

ಹೌದು ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್ ಸ್ವಪಕ್ಷೀಯರಿಂದಲೇ ಮುಜುಗರಕ್ಕೀಡಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ನಡೆದಿತ್ತು. ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕ ವೈಜನಾಥ್ ಪಾಟೀಲ್ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ವೈಜನಾಥ್ ಅವರು ಪರಮೇಶ್ವರ್ ಅವರನ್ನು ಕರೆದರೂ ಪರಮೇಶ್ವರ್ ತಿರುಗಿ ನೋಡದೆ ಹೊರಟ ಕಾರಣ ಇದರಿಂದ ಆಕ್ರೋಶಗೊಂಡ ವೈಜನಾಥ್ ಪರಮೇಶ್ವರ್ ಅವರಿಗೆ ಚಮಚಾ, ಅಧ್ಯಕ್ಷ, ನಾನು ಮಾತಾಡಿಸಿದ್ರೂ ಹಾಗೇ ಹೋಗ್ತೀಯಲ್ಲೋ ಎಂದು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.