ಆಟವಾಡ್ತಾ ಆಡ್ತಾ ರಾಜಕಾಲುವೆಗೆ ಬಲಿಯಾಯ್ತು ಎರಡೂವರೆ ವರ್ಷದ ಮಗು

ಬೆಂಗಳೂರು : ರಾಜಕಾಲುವೆಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿ ನಡೆದಿದೆ.

ಮೃತ ಮಗು ತನುಶ್ರೀ ಎಂದು ತಿಳಿದುಬಂದಿದೆ. ಕಲಬುರ್ಗಿ ಮೂಲದ ಲಕ್ಷ್ಮಿ ಹಾಗೂ ಸಾಬಣ್ಣ ದಂಪತಿ 4 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ರಾಜಕಾಲುವೆ ಪಕ್ಕದಲ್ಲೇ ಟೆಂಟ್‌ ಕಟ್ಟಿಕೊಂಡು ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು.

ಮಂಗಳವಾರ ಬೆಳಗ್ಗೆ ತನುಶ್ರೀ ಆಟವಾಡುತ್ತಾ ರಾಜಕಾಲುವೆ ಬಳಿ ಹೋಗಿ ನೀರಿನಲ್ಲಿ ಬಿದ್ದಿದೆ. ಈ ವೇಳೆ ಪೋಷಕರು ಮನೆ ಒಳಗಿದ್ದರೂ ಯಾರಿಗೂ ಮಗು ಬಿದ್ದ ಶಬ್ದ ಕೇಳಿಸಲಿಲ್ಲ. ಮಗು ಕಾಣದೇ ಇದ್ದಾಗ ರಾಜಕಾಲುವೆ ಬಳಿ ಬಂದು ನೋಡಿದ್ದಾರೆ. ಆಗ ಮಗು ನೀರಿಗೆ ಬಿದ್ದಿರುವುದು ತಿಳಿದುಬಂದಿದೆ.

ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com