ಗಂಡಸರಿಲ್ಲದೆ ಮಕ್ಕಳಾಗಿದ್ದಾದರೂ ಹೇಗೆ ಗೊತ್ತಾ : ಮಹಿಳೆ ಬಳಿ ತಹಶೀಲ್ದಾರ್ ಅನುಚಿತ ವರ್ತನೆ

ತುಮಕೂರು : ಗಂಡಸರಿಲ್ಲದೆ ಮಕ್ಕಳಾಗಿದ್ದಾದರೂ ಹೇಗೆ ಎಂದು ತಿಪಟೂರಿನ ತಹಶೀಲ್ದಾರ್‌ ಮಂಜುನಾಥ್‌ ಎಂಬಾತನೊಬ್ಬ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.

ತಿಪಟೂರಿನ ಗುರುಗದಹಳ್ಳಿ ಗ್ರಾಮದಲ್ಲಿ ಯೋಗೇಶ್ ಎಂಬುವವರ ಮನೆಗೆ ದಾರಿ ಇಲ್ಲದ ಕಾರಣ ರಸ್ತೆ ಬಿಡಿಸಿಕೊಡಲು ತಹಶೀಲ್ದಾರ್‌ ಹೋಗಿದ್ದರು. ದಾರಿ ನಿರ್ಮಿಸಬೇಕಿದ್ದರೆ ಶಕುಂತಲಾ ಎಂಬುವವರ ನಿವೇಶನದ ಜಾಗ ಬಿಡಿಸಿಕೊಡಬೇಕಿತ್ತು. ಆದರೆ ಶಕುಂತಲಾ ತಾನು ಆ ಜಾಗ ನೀಡುವುದಿಲ್ಲ ಎಂದಿದ್ದರು.

ದಾರಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್‌ ಶಕುಂತಲಾ ಅವರ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಗಂಡಸರು ಯಾರೂ ಇಲ್ಲ. ಜಾಗಕ್ಕೆ ಸಂಬಂಧಿಸಿದ ಭೂ ದಾಖಲೆಗಳನ್ನು ನಾವೇ ಬಂದು ನೀಡುತ್ತೇವೆ ಎಂದು ಶಕುಂತಲಾ ಹೇಳಿದ್ದರು.

ಈ ವೇಳೆ ತಹಶೀಲ್ದಾರ್ ಮಂಜುನಾಥ್‌, ಗಂಡಸರು ಇಲ್ಲದೆ ಮಕ್ಕಳು ಹೇಗಾಯ್ತು ಅದಾದ್ರೂ ಗೊತ್ತಾ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಇದೇ ವೇಳೆ ಅಲ್ಲಿದ್ದ ಮಹಿಳೆಯರು ಯೋಗೇಶ್‌ ಮನೆ ಮುಂದೆ ಬೈಕ್‌ ನಿಲ್ಲಿಸಿ ಹೆಂಗಸರನ್ನು ದುರುಗುಟ್ಟಿಕೊಂಡು ನೋಡುತ್ತಾನೆ ಎಂದು ತಹಶೀಲ್ದಾರ್‌ಗೆ ಕಂಪ್ಲೇಟ್‌ ಮಾಡಿದಾಗ ನೀನು ಚೆನ್ನಾಗಿದ್ದೀಯ ಅದಕ್ಕೆ ನೋಡುತ್ತಾನೆ ಬಿಡು ಎಂದು ಅನುಚಿತವಾಗಿ ವರ್ತಿಸಿದ್ದಾನೆ. ಈತನ ವರ್ತನೆಯಿಂದ ಬೇಸತ್ತ ಶಕುಂತಲಾ ಹಾಗೂ ಇತರೆ ಮಹಿಳೆಯರು ಆತನ ವಿರುದ್ದ ಎಸಿ ಕೃಷ್ಣ ಮೂರ್ತಗೆ ದೂರು ನೀಡಿದ್ದಾರೆ.

 

Leave a Reply

Your email address will not be published.