Watch : ನವಜಾತ ಶಿಶುವಿಗೆ ನರ್ಸ್ ಗಳ ಹಿಂಸೆ : ಕೆಲಸ ಕಳೆದ ವೈರಲ್ Video..!

ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಗಳಿಬ್ಬರು ಸೇರಿಕೊಂಡು ನವಜಾತ ಶಿಶುವಿಗೆ ಹಿಂಸೆ ನೀಡಿದ್ದಾರೆ. ಸೌದಿಯ ದಾದಿಯರಿಬ್ಬರು ಮಗುವಿನ ಮುಖದ ಮೇಲ್ಭಾಗ ಹಾಗೂ ಕೆಳಭಾಗವನ್ನು ಕೈಗಳಿಂದ ಒತ್ತಿ ಹಿಡಿದು ಅಪಹಾಸ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ರೆಕಾರ್ಡ್ ಮಾಡಿ ಫನ್ನಿ ವಿಡಿಯೋ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ.

ಚೈನೀಸ್ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ (CGTN) ತನ್ನ ಟ್ವಿಟರ್ ನಲ್ಲಿ ಈ ವಿಡಿಯೋ ಶೇರ್ ಮಾಡಿದೆ. ವಿಡಿಯೋ ವೀಕ್ಷಿಸಿದ ಜನರು ಸಾಮಾಜಿಕ ಜಾಲತಾಣದಲ್ಲಿ ನರ್ಸ್ ಗಳಿಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ನಂತರ ಈ ಕೃತ್ಯ ಎಸಗಿದ ದಾದಿಯರಿಬ್ಬರನ್ನು ಆಸ್ಪತ್ರೆಯ ಕೆಲಸದಿಂದ ವಜಾಗೊಳಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com