ಯಶ್‌ ಬರ್ತ್‌ಡೇಗೆ KGF ಟೀಸರ್‌ ರಿಲೀಸ್‌ : 12 ಗಂಟೆಯಲ್ಲಿ ವೀಕ್ಷಿಸಿದವರ ಸಂಖ್ಯೆ ಎಷ್ಟು ?

ಇಂದು ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್‌ ಅಭಿಮಾನಿಗಳಿಗೆ ಡಬಲ್‌ ಖುಷಿ ಸಿಕ್ಕಿದೆ. ಒಂದೆಡೆ ಯಶ್‌ ಹುಟ್ಟು ಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ಅವರ ಹುಟ್ಟುಹಬ್ಬಕ್ಕೆ ಕೆಜಿಎಫ್‌ನ ಟೀಸರ್ ರಿಲೀಸ್‌ ಆಗಿದೆ.

ಭಾನುವಾರ ರಾತ್ರಿ ಪ್ರಶಾಂತ್ ನಿಲ್‌ ಅವರ ನಿರ್ದೇಶನದ ಕೆಜಿಎಫ್‌ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಜೊತೆಗೆ ಇಂದು ಯಶ್‌ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಅಭಿಮಾನಿಗಳು ಯಶ್‌ ಅವರ ನಿವಾಸಕ್ಕೆ ಆಗಮಿಸಿದ್ದು, ನೆಚ್ಚಿನ ನಟನಿಗೆ ಬರ್ತ್‌ ಡೇ ವಿಶ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಹೊಂಬಾಳೆ ಪ್ರೊಡಕ್ಷನ್‌ ನಡಿ ನಿರ್ಮಾಣವಾದ ಕೆಜಿಎಫ್‌ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಎರಡು ಹಂತಗಳಲ್ಲಿ ಬಿಡುಗಡೆಯಾಗುವ ಕಾರಣ ಚಿತ್ರೀಕರಣ ನಡೆಯುತ್ತಿದೆ. 3 ತಿಂಗಳ ಅಂತರದಲ್ಲಿ ಸಿನಿಮಾದ ಎರಡು ಭಾಗ ರಿಲೀಸ್‌ ಆಗಲಿದೆ.

ಟೀಸರ್ ಬಿಡುಗಡೆಯಾದ 12 ಗಂಟೆಯೊಳಗೆ ಯೂಟ್ಯೂಬ್‌ನಲ್ಲಿ ಸುಮಾರು 3 ಲಕ್ಷ 94 ಸಾವಿರದ 728 ಮಂದಿ ವೀಕ್ಷಿಸಿದ್ದಾರೆ.

ಯಶ್‌ ವೃತ್ತಿ ಬದುಕಿನಲ್ಲಿ ಕೆಜಿಎಫ್‌ ಸಿನಿಮಾ ಹೊಸ ಮೈಲುಗಲ್ಲು ಸ್ಥಾಪಿಸಲಿದೆ ಎಂದೇ ಬಿಂಬಿಸಲಾಗುತ್ತಿದೆ. ಸಂಗೀತ, ಕ್ಯಾಮರಾ, ಅದ್ದೂರಿ ಸೆಟ್‌ ಹೀಗೆ ಪ್ರತಿಯೊಂದೂ ಪಕ್ಕಾ ಪ್ಲಾನ್‌ ಪ್ರಕಾರ ಮಾಡಲಾಗಿದೆ. 17 ಸಾವಿರ ವರ್ಷಗಳ ಯುದ್ದದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದರೆ ನಮ್ಮ ನೆನಪಲ್ಲಿ ಉಳಿಯೋದು ಇಬ್ಬರೇ ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನೂ ಮಾಡಿದ್ದ ಎಂಬ ಧ್ವನಿ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com