ಲಾಲೂಗೆ ಜೈಲು : ವಿಷಯ ತಿಳಿದು ಆಘಾತದಿಂದ ನಿಧನರಾದ ಸಹೋದರಿ

ಪಾಟ್ನಾ : ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಶನಿವಾರ ಬಹುಕೋಟಿ ಮೇವು ಹಗರಣದಲ್ಲಿ  ನ್ಯಾಯಾಲಯ 3.5 ವರ್ಷಗಳ ಶಿಕ್ಷೆ ವಿಧಿಸಿತ್ತು. ಈ  ಸುದ್ದಿ ಕೇಳಿ ಲಾಲೂ ಅವರ ಹಿರಿಯ ಸಹೋದರಿ ಆಘಾತಗೊಂಡು ಶಿಕ್ಷೆಯಾದ ಮರುದಿನವೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸಹೋದರಿ ಗಂಗೋತ್ರಿ ದೇವಿ, ಲಾಲೂ ಅವರಿಗೆ ಬಿಡುಗಡೆಯಾಗಲಿ ಎಂದು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಶನಿವಾರ ಅವರಿಗೆ ಶಿಕ್ಷೆಯಾಗುತ್ತಿದ್ದಂತೆ ಆಘತಗೊಂಡು ಮರುದಿನವೇ ಮೃತಪಟ್ಟಿರುವುದಾಗಿ ಬಿಹಾರ ಮಾಜಿ ಸಿಎಂ, ಲಾಲೂ ಪತ್ನಿ ರಾಬ್ಡಿ ದೇವಿ ಹೇಳಿದ್ದಾರೆ.

ಗಂಗೋತ್ರಿ ದೇವಿ ಅವರು ಲಾಲೂ ಅವರಿಗಿಂತ ನಾಲ್ಕು ವರ್ಷ ದೊಡ್ಡವರಾಗಿದ್ದು, ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಮೂಲಗಳು ವರದಿ ಮಾಡಿವೆ. ಗಂಗೋತ್ರಿ ಅವರ ಸಾವಿನ ಹಿನ್ನೆಲೆಯಲ್ಲಿ ಲಾಲೂಗೆ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಲಾಲೂ ಪುತ್ರಿ ತೇಜಸ್ವಿ ಯಾದವ್‌ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com