ದೀಪಕ್‌ ರಾವ್ ಕೊಲೆಗೆ BJP ಕಾರ್ಯಕರ್ತರೇ ಕಾರಣ : HDKಯಿಂದ ಹೊಸ ಬಾಂಬ್‌

ಮೈಸೂರು : ಮಂಗಳೂರಿನ ಕಾಟಿಪಳ್ಳಿ ನಿವಾಸಿ ದೀಪಕ್‌ ರಾವ್‌ ಕೊಲೆಗೆ ಬಿಜೆಪಿ ಕಾರ್ಯಕರ್ತರೇ ಕಾರಣ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಚ್‌ಡಿಕೆ, ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸುತ್ತಿವೆ. ಶಾಂತಿ ನೆಲಸಲು ಬೇಕಾದ ಮಾನದಂಡಗಳನ್ನು ಜೆ.ಡಿ.ಎಸ್ ಅನುಸರಿಸಲಿದೆ ಎಂದಿದ್ದಾರೆ.

ನಾಳೆ ಶಾಂತಿ ಸಭೆ ಹಾಗೂ ಸೌಹಾರ್ದ ಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎರಡು ರಾಜಕೀಯ ಪಕ್ಷಗಳ ಇತ್ತೀಚಿನ ಬೆಳವಣಿಗೆಗಳಿಂದ ಸೌಹಾರ್ದ ಯಾತ್ರೆ ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಕೋಮುವಾದ, ಜಾತ್ಯಾತೀತ ವಾದವೇ ಮುಖ್ಯವಾಗಿದೆ. ಎರಡು ಪಕ್ಷಗಳು ಜನರ ಹಿತಬಯಸುವಲ್ಲಿ ವಿಫಲಾಗಿವೆ. ಎರಡು ಪಕ್ಷಗಳ ಹಿಡನ್ ಅಜೆಂಡಾ ಕೋಮುವಾದವಾಗಿದೆ. ನಾವು ಅಭಿವೃದ್ಧಿ ವಿಚಾರವನ್ನ ಜನರ ಮುಂದಿಟ್ಟು ಮತ ಕೇಳುತ್ತೆವೆ ಎಂದು ಎರಡೂ ಪಕ್ಷಗಳ ವಿರುದ್ದ ಗುಡುಗಿದ್ದಾರೆ.

Leave a Reply

Your email address will not be published.