ದೀಪಿಕಾ ಹುಟ್ಟುಹಬ್ಬಕ್ಕೆ ರಣವೀರ್‌ ಪೋಷಕರಿಂದ ಸಿಕ್ತು ಭರ್ಜರಿ Gift : ಏನದು ?

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಲಕ್ಷಾಂತರ ಮಂದಿ ಅಭಿಮಾನಿಗಳು, ಖ್ಯಾತನಟರು ವಿಶ್ ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬದ ವೇಳೆ ದೀಪಿಕಾ ತಮ್ಮ ಗೆಳೆಯ ರಣವೀರ್‌ ಸಿಂಗ್‌ ಜೊತೆ ನ್ಯೂ ಇಯರ್‌ನ್ನು ಶ್ರೀಲಂಕಾದಲ್ಲಿ ಸ್ವಾಗತಿಸಿದ್ದಲ್ಲದೆ, ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾರೆ.

ಇದೇ ವೇಳೆ ಅವರಿಬ್ಬರ ಎಂಗೇಜ್‌ಮೆಂಟ್‌ ಸಹ ನಡೆಯುತ್ತಿದೆ ಎಂಬ ಗಾಸಿಪ್‌ಗಳು ಹಬ್ಬಿದ್ದವು. ಆದರೆ ಈ ಗಾಸಿಪ್‌ ಸುಳ್ಳು ಎಂದು ದೀಪಿಕಾ ಪ್ರೂವ್‌ ಮಾಡಿದ್ದಾರೆ. ಆದರೆ ಈ ಗಾಸಿಪ್‌ ಮುಗಿಯುತ್ತಿದ್ದಂತೆ ಮತ್ತೊಂದು ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡತೊಡಗಿದೆ. ರಣವೀರ್ ಪೋಷಕರು ದೀಪಿಕಾ ಹುಟ್ಟುಹಬ್ಬಕ್ಕಾಗಿ ಡೈಮಂಡ್‌ ನೆಕ್ಲೆಸ್‌ ಹಾಗೂ ಡಿಸೈನರ್‌ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಹೀಗಂತ ಮಾಧ್ಯಮವೊಂದು ವರದಿ ಮಾಡಿದೆ.

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com