watch : ತಲ್ವಾರ್‌ ಹಿಡಿದು ಬೀದಿಯಲ್ಲಿ ಯುವಕರ ಪುಂಡಾಟ : ಓರ್ವ Arrest

ಧಾರವಾಡ : ಹಳೇ ಹುಬ್ಬಳ್ಳಿಯ ಆನಂದ್ ನಗರದ ನಡುಬೀದಿಯಲ್ಲಿ ಯುವಕನೊಬ್ಬ ತಲ್ವಾರ್‌ ಹಿಡಿಡು ಭೀತಿ ಹುಟ್ಟಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಸುಮಾರು 8.30ಕ್ಕೆ ಧಾರವಾಡದ ರಸ್ತೆಯ ಮೇಲೆ ತಲ್ವಾರ್‌ ಹಿಡಿದು ತಿರುಗಾಡಿ ಪುಂಡಾಟ ಎಸಗಿದ್ದ. ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ಕೈಯಲ್ಲಿ ತಲ್ವಾರ್‌ಹಿಡಿದು ತಿರುಗಾಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಗಾಡಿ ನಂಬರ್ ಆಧಾರದ ಮೇಲೆ ಮಹಮ್ಮದ್‌ ಗೌಸ್‌ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಬ್ಬನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕುಡಿದ ಅಮಲಿನಲ್ಲಿ ಮಹಮ್ಮದ್‌ ಗೌಸ್‌ ತಲ್ವಾರ್‌ ಹಿಡಿದು ಪುಂಡಾಟ ನಡೆಸಿದ್ದ ಎಂದು ತಿಳಿದು ಬಂದಿದೆ. ಈತನ ಅವತಾರ ನೋಡಿ ಸ್ಥಳೀಯರು ಬಯಭೀತರಾಗಿದ್ದರು. ಪೊಲೀಸರು ಆತನನ್ನು ಬಂಧಿಸಿದ್ದು, ವಿಚರಣೆ ನಡೆಸುತ್ತಿದ್ದಾರೆ.

 

Leave a Reply

Your email address will not be published.