Hizbul ಉಗ್ರ ಸಂಘಟನೆ ಸೇರಿದ ಅಲಿಗಢ ವಿಶ್ವವಿದ್ಯಾಲಯದ Ph.D ವಿದ್ಯಾರ್ಥಿ..!

ಉತ್ತರ ಪ್ರದೇಶದ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆ ಸೇರಿಕೊಂಡಿದ್ದಾನೆ. ರಜೆಯ ಮೇಲೆ ಕಾಶ್ಮೀರದಲ್ಲಿನ ತನ್ನ ಮನೆಗೆ ತೆರಳಿದ್ದ ಮನ್ನನ್ ವಾನಿ, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಸೇರಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Image result for hizbul aligarh

ಮನ್ನನ್ ವಾನಿ ಕೈಯಲ್ಲಿ ಎಕೆ-47 ರೈಫಲ್ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಷಯ ತಿಳಿದು ಬಂದಿದೆ. ಕಣಿವೆ ರಾಜ್ಯ ಕಾಶ್ಮೀರದ ಯುವಕರು ಭಯೋತ್ಪಾದಕರಾಗುವುದನ್ನು ತಡೆಗಟ್ಟುವ ಸರಕಾರದ ಪ್ರಯತ್ನಕ್ಕೆ ಹಿನ್ನಡೆ ಉಂಟಾದಂತಾಗಿದೆ.

ಮನ್ನನ್ ವಾನಿ 4-5 ವರ್ಷಗಳಿಂದ ಅಲಿಗಢ ಮುಸ್ಲಿಮ್ ವಿಶ್ವ ವಿದ್ಯಾಲಯದಲ್ಲಿ ಭೂವಿಜ್ಞಾನ ವಿಷಯ ಅಧ್ಯಯನ ಮಾಡುತ್ತಿದ್ದ. ಕಾಶ್ಮೀರದಲ್ಲಿನ ಪ್ರವಾಹದ ಸಮಸ್ಯೆಗೆ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಮನ್ನನ್ ಮಂಡಿಸಿದ್ದ ಪ್ರಬಂಧಕ್ಕೆ ಹಲವು ಪುರಸ್ಕಾರಗಳು ಲಭಿಸದ್ದವು. ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಉಗ್ರ ಸಂಘಟನೆ ಸೇರಿರುವುದು ಸ್ಥಳೀಯರಲ್ಲಿ ಹಾಗೂ ಸ್ನೇಹಿತರಲ್ಲಿ ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com