ಸಲಿಂಗ ಕಾಮಿಗಳಿಗೆ ಸುಪ್ರೀಂನಿಂದ ಸಿಹಿಸುದ್ದಿ : ತೀರ್ಪಿನ ಮರುಪರಿಶೀಲನೆಗೆ ಒಪ್ಪಿಗೆ

ದೆಹಲಿ : ಸಲಿಂಗ ಸಂಗ ಕಾನೂನು ವಿಚಾರ ಸಂಬಂಧ ಸುಪ್ರೀಂಕೋರ್ಟ್‌ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು. 2013ರಲ್ಲಿ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ.

ಸಲಿಂಗ ಸಂಗ ಅಪರಾಧ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು 2013ರಲ್ಲಿ ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿತ್ತು. ಸಲಿಂಗ ಸಂಗ ದಂಡನೀಯ ಅಪರಾಧವೆಂದು ತೀರ್ಪು ನೀಡಿತ್ತು.

ಆದರೆ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಎಲ್‌ಬಿಬಿಟಿ ನಾಗರಿಕರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವುದಾಗಿ ಹೇಳಿದೆ.

ಜೊತೆಗೆ ಇದರ ಒಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದ್ದು, ಕೇಂದ್ರ ಸರ್ಕಾರ ಈ ವಿಚಾರ ಸಂಬಂಧ ಕೋರ್ಟ್‌ ಮುಂದೆ ಅಭಿಪ್ರಾಯ ಮಂಡಿಸಬೇಕಿದೆ.

 

Leave a Reply

Your email address will not be published.