ಹಾವೇರಿ : Death Note ಬರೆದಿಟ್ಟು ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿ ಆತ್ಮಹತ್ಯೆ..!

ಹಾವೇರಿ : ಹಾವೇರಿಯಲ್ಲಿ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾನಗಲ್ ತಾಲೂಕಿನ ಹುಲ್ಲತ್ತಿ ಶಾಖಾ ಮಠದಲ್ಲಿ  ಮಹಾನ್ ಲಿಂಗೇಶ್ವರ ಸ್ವಾಮೀಜಿ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ಬರೆದಿಟ್ಟು ಮಠದಲ್ಲಿಯೇ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ. ಇತ್ತೀಚೆಗೆ ತಡಸ ಬಳಿ ಸ್ವಾಮೀಜಿ ಕಾರಿಗೆ ಬೈಕ್ ಡಿಕ್ಕಿಯಾಗಿತ್ತು. ಬೈಕ್ ಡಿಕ್ಕಿಯಿಂದ ಗಾಯಗೊಂಡಿದ್ದ ಯುವಕ ನಿನ್ನೆ ಮೃತ ಪಟ್ಟಿದ್ದ. ಈ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತಪಡಿಸಲಾಗಿದೆ. ಹಾನಗಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com