Cricket-1st Test : ಫಿಲ್ಯಾಂಡರ್ ದಾಳಿಗೆ ಕುಸಿದ ಭಾರತ : ದ.ಆಫ್ರಿಕಾಗೆ 72 ರನ್ ಜಯ

ಕೇಪ್ ಟೌನ್ ನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತದ ವಿರುದ್ಧ 72 ರನ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೌತ್ ಆಫ್ರಿಕಾ 1-0 ಮುನ್ನಡೆ ಸಾಧಿಸಿದೆ.

ನಾಲ್ಕನೇ ದಿನದಾಟದಲ್ಲಿ ಸೌತ್ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 130 ಕ್ಕೆ ಆಲೌಟ್ ಆಯಿತು. ಎಬಿ ಡಿವಿಲಿಯರ್ಸ್ 35 ರನ್ ಗಳಿಸಿದರು. ಒಟ್ಟು 207 ರನ್ ಮುನ್ನಡೆ ಸಾಧಿಸಿದ ಆಫ್ರಿಕಾ ಭಾರತಕ್ಕೆ 208 ರನ್ ಗುರಿ ನೀಡಿತು.

ಗೆಲ್ಲಲು 208 ರನ್ ಗುರಿಯನ್ಹು ಬೆನ್ನತ್ತಿದ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 135 ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ರವಿಚಂದ್ರನ್ ಅಶ್ವಿನ್ 37, ನಾಯಕ ವಿರಾಟ್ ಕೊಹ್ಲಿ 28 ರನ್ ಗಳಿಸಿದರು. ಭುವನೇಶ್ವರ ಕುಮಾರ್ 19 ರನ್ ಗಳಿಸಿ ಅಜೇಯರಾಗುಳಿದರು. ದಕ್ಷಿಣ ಆಫ್ರಿಕಾ ಪರವಾಗಿ ಮಾರಕ ದಾಲಿ ನಡೆಸಿದ ವೆರ್ನಾನ್ ಫಿಲ್ಯಾಂಡರ್ 6 ವಿಕೆಟ್ ಕಬಳಿಸಿದರು.

Leave a Reply

Your email address will not be published.