Moral ಪೊಲೀಸ್‌ಗಿರಿ ಪ್ರಕರಣಕ್ಕೆ Twist : BJP ಯುವ ಮೋರ್ಚಾ ನಾಯಕ Arrest

ಚಿಕ್ಕಮಗಳೂರು : ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ ಧನ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣ ಸಂಬಂಧ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅನಿಲ್‌ ಎಂಬಾತನನ್ನು ಬಂಧಿಸಲಾಗಿದೆ. ವಾಟ್ಸಾಪ್‌ ಸಂದೇಶ ನೋಡಿದ್ದ ಅನಿಲ್‌ ಧನ್ಯಶ್ರೀ ಜೊತೆ ಮಾತನಾಡಿ ಬಳಿಕ ಪೋಷಕರಿಗೆ ಧಮ್ಕಿ ಹಾಕಿದ್ದ. ಈ ಘಟನೆಯಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಘಟನೆ ಕುರಿತು ಎಸ್‌ಪಿ ಅಣ್ಣಾಮಲೈ ಹೇಳಿಕೆ ನೀಡಿದ್ದು, ಆತ್ಮಹತ್ಯೆಗೂ ಮುನ್ನ ಧನ್ಯಶ್ರೀ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್‌ನಲ್ಲಿ ಅವರ ಮನೆ ಬಳಿ ಹೊಗಿ ಕೆಲವು ಹಿಂದೂಪರ ಸಂಘಟನೆಯವರು ಧಮ್ಕಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಧನ್ಯಶ್ರೀ ತಾಯಿಗು ಧಮ್ಕಿ ಹಾಕಿ ಮುಸ್ಲಿಂ ಯುವಕನ ಜೊತೆಗೆ ನಿಮ್ಮ ಮಗಳು ಓಡಾಟ ನಡೆಸುತ್ತಿದ್ದಾಳೆ. ಲವ್ ಜಿಹಾದ್ ಗೆ ಅವಕಾಶವನ್ನು ಮಾಡಿಕೊಟ್ಟಿದ್ದೀರ ಎಂದು ಬೆದರಿಸಿದ್ದಾರೆ. ಮನೆ ಬಳಿಗೆ ಹೋಗಿ ಧಮ್ಕಿ ಹಾಕಿದ್ದ 5 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು, ಅನಿಲ್‌ ಎಂಬಾತನನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಕಮೆಂಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com