ಮಧ್ಯಪ್ರದೇಶ : ಪ್ರಚಾರದ ವೇಳೆ BJP ನಾಯಕನಿಗೆ ಚಪ್ಪಲಿ ಹಾರದ ಸ್ವಾಗತ..!

ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರೊಬ್ಬರಿಗೆ ಚಪ್ಪಲಿ ಹಾರದ ಸ್ವಾಗತ ದೊರೆತಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಾಮ್ನೊದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಮತ ಯಾಚಿಸುತ್ತ ಮನೆ ಮನೆಯ ಬಾಗಿಲಿಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯ ನಾಗರಿಕರೊಬ್ಬರು ಚಪ್ಪಲಿಗಳಿಂದ ತಯಾರಿಸಿದ ಹಾರವನ್ನು, ದಿನೇಶ್ ಶರ್ಮಾ ಕೊರಳಿಗೆ ಹಾಕಿ ಸ್ವಾಗತಿಸಿದ್ದಾರೆ.

ಘಟನೆಯ ನಂತರ ಮಾತನಾಡಿದ ದಿನೇಶ್ ಶರ್ಮಾ ‘ ಅವರು ನನ್ನ ಜನ. ಯಾವುದೋ ನಿರಾಶೆಯ ಕಾರಣದಿಂದ ಅವರು ಹಾಗೆ ಮಾಡಿರಬಹುದು. ಅವರೊಂದಿಗೆ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರಕ್ಕಾಗಿ ಪ್ರಯತ್ನಿಸುತ್ತೇನೆ. ನಾನು ಅವರ ಮಗುವಿನಂತೆ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com