Bengaluru : ಕೈಲಾಶ್ ಬಾರ್ ನಲ್ಲಿ ಅಗ್ನಿ ದುರಂತ : ಮಲಗಿದ್ದ 5 ಜನರ ದುರ್ಮರಣ

ಬೆಂಗಳೂರಿನ ಬಾರೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ. ಕಲಾಸಿಪಾಳ್ಯ ಪ್ರದೇಶದಲ್ಲಿನ ಕೈಲಾಶ್ ಬಾರಿನಲ್ಲಿ ಭಾನುವಾರ ತಡರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಬಾರಿನ ಒಳಗೆ ಮಲಗಿ ನಿದ್ರಿಸುತ್ತಿದ್ದ ಐವರು ದುರ್ಮರಣಕ್ಕೆ ಈಡಾಗಿದ್ದಾರೆ.

Image result for bar fire bengaluru

ಕುಂಬಾರ ಸಂಘದ ಕಟ್ಟಡದ ನೆಲಮಹಡಿಯಲ್ಲಿನ ಕೈಲಾಶ್ ಬಾರಿನಲ್ಲಿ ರಾತ್ರಿ 2.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಳಿಗ್ಗೆ ವಿಷಯ ತಿಳಿದ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬಾರಿನ ಬಾಗಿಲನ್ನು ಮುರಿದು ಒಳಪ್ರವೇಸಿದ್ದಾರೆ.

ಪ್ರಾಥಮಿಕ ತನಿಖೆಯ ವರದಿ ಪ್ರಕಾರ ನಿದ್ದೆಯಲ್ಲಿದ್ದ ಕೆಲಸಗಾರರು ಉಸಿರು ಗಟ್ಟಿ ಸಾವನ್ನಪ್ಪಿರಬಹುದೆಂದು ತಿಳಿದು ಬಂದಿದೆ. ಬಾರ್ ಮಾಲೀಕನ ವಿರುದ್ಧ ಸ್ಥಳೀಯ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com