Watch : ಲೆಕ್ಕ ಇಡ್ತೀನಿ, ಯಾರನ್ನೂ ಬಿಡಲ್ಲ : ಭಯಾನಕ ರೂಪದಲ್ಲಿ ಭಾಗಮತಿ ಎಂಟ್ರಿ

ಬಾಹುಬಲಿ ಸಿನಿಮಾದ ಬಳಿಕ ನಟಿ ಅನುಷ್ಕಾ ಶರ್ಮಾ ಈಗ ಭಯಾನಕ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ.

ಬಾಹುಬಲಿ ಸಿನಿಮಾದ ಬಳಿಕ ಅನುಷ್ಕಾರ ಮೊದಲ ಸಿನಿಮಾ ಇದಾಗಿದ್ದು, ಆರ್‌. ಅಶೋಕ್‌ ನಿರ್ದೇಶನ ಸಿನಿಮಾಕ್ಕಿದೆ. ವಂಶಿ ರೆಡ್ಡಿ ನಿರ್ಮಾಪಕರಾಗಿರುವ ಈ ಸಿನಿಮಾ ಹಾರರ್‌, ಥ್ರಿಲ್ಲರ್‌ ರೂಪದಲ್ಲಿ ಮೂಡಿಬಂದಿದೆ.

ಸಿನಿಮಾದ ಮೊದಲ ಅರ್ಧಭಾಗದಲ್ಲಿ ಮೃದು ಸ್ವಭಾವದ ರೊಮ್ಯಾಂಟಿಕ್‌ ಹುಡುಗಿಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದರೆ. ಇನ್ನರ್ಧ ಭಾಗದಲ್ಲಿ ಹಾರರ್‌ ಪಾತ್ರದ ಮೂಲಕ ಅದ್ಭುತ ನಟನೆ ಮಾಡಿದ್ದಾರೆ. ಈ ಟೀಸರ್‌ ನೋಡುತ್ತಿದ್ದರೆ ಮತ್ತೊಮ್ಮೆ ಅರುಂಧತಿ ಸಿನಿಮಾ ಕಣ್ಣ ಮುಂದೆ ಹಾದು ಹೋಗುತ್ತದೆ.

ಮೊದಲು ಅನುಷ್ಕಾ ಐಎಎಸ್‌ ಅಧಿಕಾರಿಯಾಗಿ, ಬಳಿಕ ಜೈಲುವಾಸಿಯಾಗಿ ನಂತರ ಪಾಳು ಮನೆಯೊಂದರಲ್ಲಿ ಪ್ರೇತಾತ್ಮ ಮೈಮೇಲೆ ಬರುವ ದೃಶ್ಯ ಮೈನವಿರೇಳಿಸುವಂತಿದೆ.ಜನವರಿ 26ರಂದು ಸಿನಿಮಾ ತೆರೆ ಕಾಣಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com