40ರ ಚೆಲುವೆ ಐಶ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಈಕೆ ಸಂಭಾವನೆ ಕೇಳಿದ್ರೆ ತಲೆ ಗಿರ್‌ ಅನ್ನುತ್ತೆ..!

ಸಾಮಾನ್ಯವಾಗಿ ನಟಿಯರು ಮದುವೆಯಾದರೆಂದರೆ ಅವರ ಸಿನಿಮಾ ಕರಿಯರ್‌ ಮುಗಿದುಹೋಯಿತು ಎಂದೇ ಹೇಳಲಾಗುತ್ತದೆ. ಆದರೆ ನಮ್ಮ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ವಿಚಾರದಲ್ಲಿ ಈ ವಾದ ತಲೆಕೆಳಗಾಗಿದೆ. ಐಶ್‌ಗೆ 40 ವರ್ಷ ದಾಟಿ, ಒಂದು ಮಗುವಿನ ತಾಯಿಯಾಗಿದ್ದರೂ, ಆಫರ್‌ಗಳಿಗೇನೂ ಕಡಿಮೆ ಇಲ್ಲ.

ಹೌದು ಐಶ್‌ ಜೊತೆ ಅಭಿನಯಿಸಲು ನಮ್ಮ ಯಂಗ್‌ ಹಿರೋಗಳು ಇನ್ನೂ ಹಪಹಪಿಸುತ್ತಿದ್ದಾರಂತೆ. ಇನ್ನು ನಿರ್ಮಾಪಕರು ಸಹ ಅವರು ಕೇಳಿದಷ್ಟು ಸಂಭಾವನೆ ಕೊಡಲು ಸಿದ್ದವಿದ್ದು, ತಮ್ಮ ಚಿತ್ರಕ್ಕೆ ಐಶ್ವರ್ಯಾ ರೈ ಬೇಕು ಎಂದು ಕಾಲ್‌ಶೀಟ್‌ಗಾಗಿ ಕ್ಯೂನಲ್ಲಿ ನಿಂತಿದ್ದಾರೆ.

ಇತ್ತೀಚೆಗಷ್ಟೇ ರಣಬೀರ್‌ ಕಪೂರ್‌ ಜೊತೆ ಯೆ ದಿಲ್‌ ಹೈ ಮುಷ್ಕಿಲ್‌ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾಗೆ ಈಗ ಮತ್ತೊಂದು ಆಫರ್ ಬಂದಿದೆಯಂತೆ. ರಾತ್ ಔರ್‌ ದಿನ್‌ ಎಂಬ ರಿಮೇಕ್‌ ಚಿತ್ರದ ಕತೆ ಐಶ್‌ಗೆ ಇಷ್ಟವಾಗಿದ್ದು, ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 10 ಕೋಟಿ ಸಂಭಾವನೆ ಕೇಳಿದ್ದಾರೆ. ಚಿತ್ರ ನಿರ್ಮಾಪಕರು ದೂಸರಾ ಮಾತಾಡದೇ ಐಶ್‌ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ ಎಂದು ಬಾಲಿವುಡ್‌ ಅಂಗಳಲ್ಲಿ ಸುದ್ದಿ ಹರಿದಾಡುತ್ತಿದೆ.

Leave a Reply

Your email address will not be published.