ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ATM ಇದ್ದಂತೆ : ಯೋಗಿ ಆದಿತ್ಯನಾಥ್

ವಿಜಯನಗರದ ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ‘ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಇದ್ದಂತೆ ‘ ಎಂದಿದ್ದಾರೆ. ‘ ಕರ್ನಾಟಕವನ್ನು ಹೊರತು ಪಡಿಸಿ ಬೇರೆ ಯಾವುದೇ ದೊಡ್ಟ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ ‘ ಎಂದು ಹೇಳಿದ್ದಾರೆ.

ವಿಜಯನಗರ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ಶ್ರೀಬಾಲಗಂಗಾಧರ ನಾಥ ಸ್ವಾಮೀಜಿ ನೆನಸಿಕೊಂಡರು. ಆದಿತ್ಯನಾಥ್ ಭಾಷಣದ ವೇಳೆ ವೇದಿಕೆ ಮೇಲೆ ಡಿಜಿಟಲ್ ಪರದೆಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ಪ್ರದರ್ಶನಗೊಂಡ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಭಾವಚಿತ್ರ ಪ್ರದರ್ಶಿಸಲಾಯಿತು.

Leave a Reply

Your email address will not be published.