Kohli ಔಟಾದ ರೀತಿಗೆ ಬೇಸರ : 65 ವರ್ಷದ ಅಭಿಮಾನಿ ಮಾಡಿದ್ದೇನು..?

ಕೇಪ್ ಟೌನ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 5 ರನ್ ಗಳಿಸಿ ಔಟಾಗಿದ್ದರು. ಮಾರ್ನ್ ಮಾರ್ಕೆಲ್ ಎಸೆದ ಬೌನ್ಸರ್ ವಿರಾಟ್ ಕೊಹ್ಲಿ ಬ್ಯಾಟ್ ಸವರಿಕೊಂಡು ಕೀಪರ್ ಕೈ ಸೇರಿಕೊಂಡಿತ್ತು.

Disturbed by Virat Kohli’s dismissal, 65-year-old man sets self on fire

ಕೊಹ್ಲಿ ಔಟಾದ ರೀತಿಗೆ ಬೇಸರಗೊಂಡ ವ್ಯಕ್ತಿಯೊಬ್ಬ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ತನ್ನ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ 65 ವರ್ಷದ ಬಾಬುಲಾಲ್ ಬೈರ್ವಾ, ಕೊಹ್ಲಿ ಔಟಾದ ನಂತರ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

Image result for fire set on man

ಬೆಂಕಿಯಿಂದ ನರಳುತ್ತಿದ್ದ ವ್ಯಕ್ತಿಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದೇಹದ 11 % ರಷ್ಟು ಭಾಗ ಸುಟ್ಟುಹೋಗಿದೆ. ಆತನ ತಲೆ, ಕೈ ಹಾಗೂ ಮುಖಗಳಿಗೆಲ್ಲ ಸುಟ್ಟ ಗಾಯಗಳಾಗಿವೆ.

 

Leave a Reply

Your email address will not be published.

Social Media Auto Publish Powered By : XYZScripts.com