Sachin ಪುತ್ರಿ ಸಾರಾಗೆ ಫೋನ್ ಮೂಲಕ ಕಿರುಕುಳ : ವ್ಯಕ್ತಿಯ ಬಂಧನ

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾಗೆ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬನನ್ನು ಪೋಲೀಸರು ಭಾನುವಾರ ಬಂಧಿಸಿದ್ದಾರೆ. ಮುಂಬೈ ಹಾಗೂ ಪಶ್ಚಿಮ ಬಂಗಾಳ ಪೋಲೀಸರ ಜಂಟಿ ತಂಡ ಪೂರ್ವ ಮಿಡ್ನಾಪುರ ಜಿಲ್ಲೆಯ ಮಹಿಸದಾಲ್ ಪ್ರದೇಶದಲ್ಲಿ ದೇಬಕುಮಾರ್ ಮೈತಿ ಎಂಬಾತನನ್ನು ಬಂಧಿಸಿದ್ದಾರೆ.

Related image

‘ ಮುಂಬೈ ಪೋಲೀಸ್ ಇಲಾಖೆಯ ಇಬ್ಬರು ಸದಸ್ಯರನ್ನೊಳಗೊಂಡ ತಂಡವೊಂದು ಇಲ್ಲಿಗೆ ಆಗಮಿಸಿತ್ತು. ನಮ್ಮ ತಂಡ ಹಾಗೂ ಮುಂಬೈ ಪೋಲೀಸರ ತಂಡ ಸೇರಿ ದೇಬಕುಮಾರ್ ಮೈಟಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಚಿನ್ ಪುತ್ರಿ ಸಾರಾಗೆ ಫೋನ್ ಮೂಲಕ ಕಿರುಕುಳ ನೀಡುತ್ತಿದ್ದ ಆರೋಪ ಆತನ ಮೇಲಿತ್ತು ‘ ಎಂದು ಮಹಿಸದಾಲ್ ಪೋಲೀಸ್ ಠಾಣೆಯ ಅಧಿಕಾರಿ ಪಾರ್ಥ ಬಿಸ್ವಾಸ್ ಹೇಳಿದ್ದಾರೆ.

 

2 thoughts on “Sachin ಪುತ್ರಿ ಸಾರಾಗೆ ಫೋನ್ ಮೂಲಕ ಕಿರುಕುಳ : ವ್ಯಕ್ತಿಯ ಬಂಧನ

Leave a Reply

Your email address will not be published.

Social Media Auto Publish Powered By : XYZScripts.com