ಹಾಸನ : ಅಜೇಯ 400 ರನ್ ಬಾರಿಸಿದ ಶಿಯಾಸ್ ಅಲಿ : ದೇಶಿ Cricket ನಲ್ಲಿ ವಿನೂತನ ಸಾಧನೆ

ಹಾಸನ : ದೇಸಿ ಕ್ರಿಕೇಟ್ ನಲ್ಲಿ ಹಾಸನದ ಬಾಲಕನೊಬ್ಬ ಇನ್ನಿಂಗ್ಸ್ ನಲ್ಲಿ 400 ರನ್ ಬಾರಿಸಿ ಸಾಧನೆ ಮಾಡಿದ್ದಾನೆ. 15 ವರ್ಷದ ಶಿಯಾಸ್ ಅಲಿ ಎಂಬ ಬಾಲಕ ಕೆ.ಎಸ್ .ಸಿ.ಎ. ವತಿಯಿಂದ ನಡೆಯುತ್ತಿರುವ ೧೬ವರ್ಷದ ಒಳಗಿನವರ  ಲೀಗ್ ಶಿವಮೊಗ್ಗ ಝೋನ್  ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿದ್ದಾನೆ.

ಸೋಬರ್ಸ್ ಕ್ರಿಕೇಟರ್ಸ್ ಮತ್ತು ಸಿಟಿ ಕ್ರಿಕೇಟರ್ಸ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಸಿಟಿ ಕ್ರಿಕೇಟರ್ಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ಶಿಯಾಸ್ ಅಲಿ ಔಟಾಗದೇ 400 ರನ್ ಬಾರಿಸಿದ್ದಾನೆ. ಹಾಸನ ನಗರದ ವಿಜ್ನಾನ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಬೇಲೂರು ತಾಲೂಕಿನ ಅರೇಹಳ್ಳಿಯ ಅಶ್ರಫ್ ಶಬಾನ ದಂಪತಿ ಪುತ್ರ ಶಿಯಾಸ್ ಅಲಿ ವಿನೂತನ ಸಾಧನೆ ಗೈದಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com