ಮಂಗಳೂರು ಹಲ್ಲೆ ಪ್ರಕರಣ : ಗಾಯಾಳು ಬಶೀರ್ ಆಸ್ಪತ್ರೆಯಲ್ಲಿ ಸಾವು

ಮಂಗಳೂರು ನಗರದ ಕೊಟ್ಟಾರ ಚೌಕಿ ಬಳಿಯಲ್ಲಿ ಬುಧವಾರ ರಾತ್ರಿ ಹಲ್ಲೆಗೊಳಗಾಗಿದ್ದ ಅಹಮ್ಮದ್ ಬಶೀರ್, ಚಿಕಿತ್ಸೆ ಫಲಕಾರಿಯಾಗದೇ ಎ.ಜೆ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಬಶೀರ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ವೈದ್ಯರು ಬಶೀರ್ ಅವರಿಗೆ ಹಲವು ಶಸ್ತ್ರ ಚಿಕಿತ್ಸೆಯನ್ನು ನಡೆಸಿದರೂ ಪ್ರಯೋಜನವಾಗಿಲ್ಲ.

ಕಾಟಿಪಳ್ಳದಲ್ಲಿ ಕೊಲೆಯಾಗಿದ್ದ ದೀಪಕ್ ರಾವ್ ಸಾಔಇನ ಪ್ರತೀಕಾರವಾಗಿ ನಾಲ್ವರು ಯುವಕರು ತಲ್ವಾರಿನಿಂದ ಹಲ್ಲೆ ನಡೆಸಿದ್ದರು. ಬಶೀರ್ ಮೇಲೆ ಹಲ್ಲೆ ನಡೆಸಿದ್ದ ಧನುಶ್, ಕಿಶನ್, ಶ್ರೀಜಿತ್ ಹಾಗೂ ಸಂದೇಶ್ ಕೋಟ್ಯಾನ್ ಅವರನ್ನು ಪೋಲೀಸರು ಶನಿವಾರ ಬಂಧಿಸಿದ್ದರು.

Leave a Reply

Your email address will not be published.