Ashes Cricket : ಮಾರ್ಷ್ ಸೋದರರ ಶತಕದ ಸೊಬಗು : ಸಂಕಷ್ಟದಲ್ಲಿ ಇಂಗ್ಲೆಂಡ್

ಸಿಡ್ನಿಯಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಗೆಲುವಿನತ್ತ ಸಾಗಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ಇನ್ನೂ 210 ರನ್ ಹಿನ್ನಡೆಯಲ್ಲಿದೆ.

ನಾಯಕ ಜೋ ರೂಟ್ (42*) ಹಾಗೂ ಜಾನಿ ಬೇರ್ಸ್ಟೋ (17*) ಅಜೇಯರಾಗುಳಿದಿದ್ದಾರೆ. ಆಸ್ಟ್ರೇಲಿಯಾದ ಪರವಾಗಿ ನೇಥನ್ ಲಾಯನ್ 2, ಮಿಚೆಲ್ ಸ್ಟಾರ್ಕ್ 1, ಪ್ಯಾಟ್ರಿಕ್ ಕಮ್ಮಿನ್ಸ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ, ಮಾರ್ಷ್ ಸೋದರರ ಶತಕಗಳ ನೆರವಿನಿಂದ 649 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಶತಕ ಬಾರಿಸಿದ ಶಾನ್ ಮಾರ್ಷ್ 156, ಹಾಗೂ ಮಿಚೆಲ್ ಮಾರ್ಷ್ 101 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com