ರಾಜಕೀಯಕ್ಕೆ ನಟಿ ಭಾವನಾ ಎಂಟ್ರಿ..? : ಸುದ್ದಿಗೋಷ್ಟಿಯಲ್ಲಿ ಹೇಳಿದ್ದೇನು..?

ಇದುವರೆಗೆ ಕನ್ನಡದ ಹಲವಾರು ನಟ, ನಟಿಯರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಕೆಲವರು ಯಶಸ್ಸು ಗಳಿಸಿದ್ದರೆ, ಕೆಲವರು ವಿಫಲರಾಗಿದ್ದಾರೆ. ಅಂಬರೀಶ್, ಜಗ್ಗೇಶ್, ಉಪೇಂದ್ರ, ಪೂಜಾ ಗಾಂಧಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಮತ್ತೋರ್ವ ನಟಿ ಭಾವನಾ ಕೂಡ ರಾಜಕೀಯ ಪ್ರವೇಶಿಸಲು ಸಿದ್ಧರಾಗಿದ್ದಾರೆ.

ಸ್ಯಾಂಡಲ್ ವುಡ್ ನಟಿ ಭಾವನಾ ಚುನಾವಣಾ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರಂತೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ಲಾನ್ ಮಾಡಿಕೊಂಡಿರುವ ಭಾವನಾ ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಚಿತ್ರದುರ್ಗ ಮತಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಾವನಾ ‘ ವರಿಷ್ಟರು ಬೆನ್ನುತಟ್ಟಿ ಕಳಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸವಿದೆ. ಜನೇವರಿ 15ರಿಂದ ಚಿತ್ರದುರ್ಗದಲ್ಲೇ ಇರುತ್ತೇನೆ. ಚಿತ್ರದುರ್ಗದ ಬುರುಜನಹಟ್ಟಿ ನನ್ನ ತವರು. ಪತ್ರಿಕಾಗೋಷ್ಠಿಯಲ್ಲಿ ನಟಿ ಭಾವನ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com