ತಾಕತ್ತಿದ್ದರೆ ಮೋದಿ ದಲಿತರ ಬಗ್ಗೆ ಮಾತನಾಡಲಿ : ಜಿಗ್ನೇಶ್ ಮೇವಾನಿ

ದೆಹಲಿ : ಮಹರಾಷ್ಟ್ರದ ವಿಜಯ್‌ ಕೋರೆಗಾಂವ್ ಹಿಂಸಾಚಾರದ ಬಳಿಕ ಮುಂಬೈನಲ್ಲಿ ಜಿಗ್ನೇಶ್‌ ಮೇವಾನಿ ಅವರ ಭಾಷಣಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಜಿಗ್ನೇಶ್‌ ವಾಗ್ದಾಳಿ ನಡೆಸಿದ್ದಾರೆ.

ನನ್ನನ್ನು ಕೇಂದ್ರ ಸರ್ಕಾರ ಟಾರ್ಗೆಟ್‌ ಮಾಡುತ್ತಿದೆ ಎಂದು ಆರೋಪಿಸಿರುವ ಜಿಗ್ನೇಶ್ ಮಹರಾಷ್ಟ್ರ ಗಲಭೆ ಕುರಿತು ಅವರು ಹೇಳಿಕೆ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ನಾನು ಪ್ರಚೋದನಕಾರಿ ಭಾಷಣ ಮಾಡುತ್ತೇನೆ ಹಾಗೂ ಕೋಮುಭಾವನೆ ಕೆರಳಿಸುತ್ತೇನೆ ಎಂದು ನನ್ನ ವಿರುದ್ದ ಎಫ್‌ಐಆರ್‌ ದಾಖಲಾಗಿದೆ. ಆದರೆ ನಾನು ಒಮ್ಮೆಯೂ ಪ್ರಚೋದನಕಾರಿಯಾಗಿ ಮಾತನಾಡಿಲ್ಲ ಎಂದಿದ್ದಾರೆ. ಬಿಜೆಪಿಗೆ ನನ್ನ ಕಂಡರೆ ಭಯವಿದೆ. ಗುಜರಾತ್‌ನಲ್ಲಿ ನನ್ನ ಗೆಲುವಿನಿಂದಾಗಿ ನನ್ನನ್ನು ಟಾರ್ಗೆಟ್‌ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಬಂದ್‌ ಕುರಿತಂತೆ ಮಾತನಾಡಿರುವ ಜಿಗ್ನೇಶ್‌, ನಮಗೆ ಜಾತಿ ಮುಕ್ತ ಭಾರತ ಬೇಕಾಗಿದೆ. ಭೀಮ ಕೋರೆಗಾಂವ್‌ ವಿಜಯದ 200ನೇ ವಾರ್ಷಿಕೋತ್ಸವದಲ್ಲಿ ದಲಿತರು ಶಾಂತಿಯುತವಾಗಿ ರ್ಯಾಲಿ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದು, ದಲಿತರ ಮೇಲಿನ ಹಲ್ಲೆ ಹಾಗೂ ಅವರ ಮೇಲಿನ ದೌರ್ಜನ್ಯಗಳ ವಿರುದ್ದ ಜನವರಿ 9 ರಂದು ದೆಹಲಿಯಲ್ಲಿ ಯುವ ಹಂಕಾರ್‌ ರ್ಯಾಲಿ ನಡೆಸುವುದಾಗಿ ಹೇಳಿದ್ದಾರೆ.

2010ರಲ್ಲಿ ಪ್ರಧಾನಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ದಲಿತರನ್ನು ಮಾನಸಿಕ ಅಸ್ವಸ್ಥ ಮಕ್ಕಳಿಗೆ ಹೋಲಿಕೆ ಮಾಡಿದ್ದಲ್ಲದೆ ಅಂಬೇಡ್ಕರ್‌ ಕ್ರಾಂತಿಕಾರಿಯಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ದಲಿತರ ವಿಚಾರವಾಗಿ ಮಾತನಾಡುತ್ತಿಲ್ಲ ಎಂದು ಆರೋಪಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com