ಮೇವು ಹಗರಣ : ಲಾಲೂಗೆ 3.5 ವರ್ಷ ಜೈಲುಶಿಕ್ಷೆ, 5 ಲಕ್ಷ ದಂಡ ವಿಧಿಸಿದ ಕೋರ್ಟ್

ಬಹುಕೋಟಿ ಮೇವು ಹಗರಣದ ಪ್ರಮುಖ ಆರೋಪಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಗೆ 3.5 ವರ್ಷ ಜೈಲು ವಾಸದ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಹಗರಣದಲ್ಲಿ ಭಾಗಿಯಾಗಿದ್ದ ಇತರ ದೋಷಿಗಳಾದ, ಫೂಲ್ ಚಂದ್, ಮಹೇಶ್ ಪ್ರಸಾದ್, ಬೇಕ್ ಜೂಲಿಯಸ್, ಸುನಿಲ್ ಕುಮಾರ್, ಸುಶಿಲ್ ಕುಮಾರ್, ಸುಧೀರ್ ಕುಮಾರ್, ರಾಜಾ ರಾಮ್ ಅವರಿಗೂ 3.5 ವರ್ಷ ಜೈಲು ಹಾಗೂ 5 ಲಕ್ಷ ರೂ ದಂಡ ವಿಧಿಸಲಾಗಿದೆ.

1990 ರಿಂದ 1994 ರ ನಡುವೆ ದೇವಗಢ ಜಿಲ್ಲೆಯ ಖಜಾನೆಯಿಂದ 84.5 ಲಕ್ಷ ರೂಗಳನ್ನು ಅಕ್ರಮವಾಗಿ ಬಳಸಿಕೊಂಡ ಆರೋಪವನ್ನು ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಎದುರಿಸುತ್ತಿದ್ದರು. 2017 ರ ಡಿಸೆಂಬರ್ 23 ರಂದು ಸಿಬಿಐ ವಿಶೇಷ ನ್ಯಾಯಾಲಯ, ಮೇವು ಹಗರಣದಲ್ಲಿ ಲಾಲೂ ದೋಷಿ ಎಂದು ಅಂತಿಮ ತೀರ್ಪು ನೀಡಿತ್ತು.

ಬಿಹಾರದ ಜನರಿಗೆ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ.

Leave a Reply

Your email address will not be published.