ಪಶ್ಚಿಮ ಬಂಗಾಳ CM ಮಮತಾ ಬ್ಯಾನರ್ಜಿ ಪೇಂಟಿಂಗ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!!

ಕೋಲ್ಕತಾ : ಹೋರಾಟಕ್ಕೆ ಹೆಸರುವಾಸಿಯಾಗಿರುವ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಿಎಂ ಆಗಿ ಎಲ್ಲರಿಗೂ ಚಿರಪರಿಚಿತರು. ಇವರು ಕೇವಲ ರಾಜಕೀಯ ಮಾತ್ರವಲ್ಲ, ಪೇಂಟಿಂಗ್‌ನಲ್ಲೂ ಹೆಸರುವಾಸಿಯಾಗಿದ್ದು, ಅವರ ಪೇಂಟಿಂಗ್‌ಗಳು ಲಕ್ಷಾಂತರ ರೂಗಳಿಗೆ ಮಾರಾಟವಾಗುತ್ತಿವೆ.

ಮಮತಾ ಬ್ಯಾನರ್ಜಿ ಬಿಡುವಿನ ವೇಳೆಯಲ್ಲಿ ಪೇಂಟಿಂಗ್‌ ಕೆಲಸ ಮಾಡುತ್ತಾರಂತೆ.2006ರಲ್ಲಿ ಹವ್ಯಾಸಕ್ಕೆಂದು ಪೇಂಟಿಂಗ್ ಶುರು ಮಾಡಿದ್ದು, ಈಗ ಮಮತಾ ಬ್ಯಾನರ್ಜಿ ಅವರ ಪೇಂಟಿಂಗ್‌ಗಳಿಗೆ ಭಾರೀ ಬೇಡಿಕೆ ಇದೆಯಂತೆ. ಪ್ರದರ್ಶನಗಳಲ್ಲೂ ಮಮತಾ ಬಿಡಿಸಿದ ಪೇಂಟಿಂಗ್ ಇಡಲಾಗುತ್ತಿದ್ದು, ಅದರ ಮಾರಾಟದಿಂದ ಬಂದ ಹಣವನ್ನು ಪಕ್ಷದ ಪ್ರಚಾರ ಕೆಲಸಕ್ಕೆ ಬಳಕೆ ಮಾಡುತ್ತಿದ್ದಾರೆ.

ಇದುವರೆಗೂ ಅವರ 100ಕ್ಕೂ ಹೆಚ್ಚು ಪೇಂಟಿಂಗ್‌ಗಳು ಪ್ರದರ್ಶನಗೊಂಡಿದ್ದು. ಲಕ್ಷಾಂತರ ರೂ ನೀಡಿ ಮಮತಾ ಅಭಿಮಾನಿಗಳು ಅದನ್ನು ಖರೀದಿ ಮಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com