SHOCKING : ಪ್ರೀತಿಸಿದ ಯುವತಿಯನ್ನು ಗರ್ಭಿಣಿ ಮಾಡ್ದ ಈತ ಬಳಿಕ ಮಾಡಿದ್ದೇನು ?

ಗದಗ : ಇತ್ತೀಚೆಗೆ ಪ್ರೀತಿ ಎಂಬ ಪದ ತನ್ನ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಪ್ರೀತಿ ಹೆಸರಿನಲ್ಲಿ ಮೋಸ ಮಾಡಿ ಕೈಕೊಡುವವರೇ ಹೆಚ್ಚು, ಅದೇ ರೀತಿ ಗದಗದಲ್ಲಿ ತಾನು ಪ್ರೀತಿಸಿದ ಯುವತಿಯ ಮೇಲೆ ಯುವಕ ಅತ್ಯಾಚಾರ ಮಾಡಿ ನ್ಯಾಯ ಕೇಳಲು ಬಂದ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಗದಗದ ಮುಂಡರಗಿ ತಾಲ್ಲೂಕಿನ ಶಿಂಗಾಟಾಲೂರ ಗ್ರಾಮದಲ್ಲಿ ಘಟನೆ ನಡೆದಿದೆ. ದಾಳಿಗೊಳಗಾದ ಸಂತ್ರಸ್ತೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಆರೋಪಿಯನ್ನು ಪ್ರಕಾಶ್ ಮುಂಡವಾಡ ಎಂದು ಗುರುತಿಸಲಾಗಿದೆ. ಪ್ರಕಾಶ್‌ ಹಾಗೂ ಸಂತ್ರಸ್ತೆ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿದ ಮೇಲೆ ಸಂತ್ರಸ್ತೆಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಮೇಲೂ ಆಕೆ ಪ್ರಕಾಶ್‌ ಜೊತೆ ಸಂಪರ್ಕ ಇಟ್ಟುಕೊಂಡಿದ್ದು, ಗಂಡನನ್ನು ಬಿಟ್ಟು ತವರಿಗೆ ಬಂದಿದ್ದಳು.

ಮತ್ತೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ಧಳು. ಬಳಿಕ ಮದುವೆಯಾಗುವಂತೆ ಪ್ರಕಾಶ್‌ನನ್ನು ಕೇಳಿದ್ದಳು. ಆದರೆ ಪ್ರಕಾಶ್‌ ನಮ್ಮಿಬ್ಬರದು ಬೇರೆ ಜಾತಿ, ವಿವಾಹ ಸಾಧ್ಯವಿಲ್ಲ ಎಂದಿದ್ದ. ಇದರಿಂದ ನೊಂದ ಸಂತ್ರಸ್ತೆ ನ್ಯಾಯ ಕೇಳಲು ತಾಯಿಯ ಜೊತೆ ಪ್ರಕಾಶ್‌ ಮನೆಗೆ ಹೋದಾಗ, ಪ್ರಕಾಶ್‌ ಹಾಗೂ ಆತನ ಕುಟುಂಬಸ್ಥರು ಯುವತಿ ಮೇಲೆ ಸೀಮೇಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಕೂಡಲೆ ತಾಯಿ ತನ್ನ ಸಹೋದರರಿಗೆ ವಿಷಯ ತಿಳಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಪ್ರಕಾಶ್ ವಿರುದ್ದ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವನಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com