ಬೇಗ ಔಟಾಗಿದ್ದಕ್ಕೆ Kohli ಬಗ್ಗೆ ಆಕ್ರೋಶ : Twitter ಫ್ಯಾನ್ಸ್ ಹೇಳಿದ್ದೇನು..?

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕೇಪ್ ಟೌನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 5 ರನ್ ಗೆ ಔಟ್ ಆಗಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಅಭಿಮಾನಿಗಳ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊಹ್ಲಿಯನ್ನು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಗೆ ಹೋಲಿಸಿ ಟೀಕೆ ಮಾಡಿದ್ದಾರೆ.
  •  ‘ ಭಾರತೀಯ ಉಪಖಂಡದಲ್ಲಿ ಮಾತ್ರವೇ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ, ವಿದೇಶಗಳಲ್ಲಿ ವಿಫಲರಾಗ್ತಾರೆ ‘ ಎಂದಿದ್ದಾರೆ.
  • ಬ್ಯಾಟಿಂಗ್ ಗೆ ನೆರವಾಗುವ ಫ್ಲ್ಯಾಟ್ ಪಿಚ್ ಗಳಲ್ಲಷ್ಟೇ ಕೊಹ್ಲಿ ಸೆಂಚುರಿ, ದ್ವಿಶತಕ ಬಾರಿಸುತ್ತಾರೆ, ಬೌಲಿಂಗ್ ನೆರವಾಗುವ ಪಿಚ್ ನಲ್ಲಿ ಫೇಲ್ ಆಗುತ್ತಾರೆ ‘ ಎಂದು ಕಿಡಿ ಕಾರಿದ್ದಾರೆ.
  • ಮತ್ತೆ ಕೆಲವರು ವಿದೇಶಗಳಲ್ಲಿ ಉತ್ತಮ ಸರಾಸರಿ ಹೊಂದಿರುವ ಅಜಿಂಕ್ಯ ರಹಾನೆಯನ್ನು ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ‘ ಹನಿಮೂನ್ ನಡುವೆಯೇ ಕೈ ಬಿಟ್ಟು ಕೆಲಸಕ್ಕೆ ಹಾಜರಾಗು ಎಂದರೆ ಹೀಗೆ ಆಗುತ್ತೆ ‘ ಎಂದಿದ್ದಾರೆ.
  • ‘ ಇತ್ತೀಚೆಗಷ್ಟೇ ಕ್ಯಾಪ್ಟನ್ ಮದುವೆಯಾಗಿದೆ. ಹನಿಮೂನ್ ಹ್ಯಾಂಗ್ ಓವರ್ ಇನ್ನೂ ಇಳಿದಿಲ್ಲ ‘ ಎಂದು ತಮಾಷೆ ಮಾಡಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com