Cricket : ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ : ಆತಿಥೇಯರಿಗೆ ಮುನ್ನಡೆ

ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಸೌತ್ ಆಫ್ರಿಕಾ ತಂಡ 142 ರನ್ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ ತನ್ನ 2ನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ.

ನೈಟ್ ವಾಚ್ಮನ್ ರೂಪದಲ್ಲಿ ಬ್ಯಾಟಿಂಗ್ ಗೆ ಬಂದಿರುವ ಕಗಿಸೋ ರಬಾಡಾ (2*) ಹಾಗೂ ಹಾಶಿಮ್ ಆಮ್ಲ (4*) ಅಜೇಯರಾಗುಳಿದಿದ್ದಾರೆ. ಭಾರತದ ಪರವಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

Image result for hardik pandya test capetown south africa

ಇದಕ್ಕೂ ಮುನ್ನ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 209ಕ್ಕೆ ಆಲೌಟ್ ಆಯಿತು. ಮಿಂಚಿನ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 93 ರನ್ ಗಳಿಸಿದರು. ಶತಕ ವಂಚಿತರಾದ ಪಾಂಡ್ಯ, ಒಟ್ಟು 14 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಉತ್ತಮ ಸಾಥ್ ನೀಡಿದ ಭುವನೇಶ‍್ವರ್ ಕುಮಾರ್ 25 ರನ್ ಗಳಿಸಿದರು. ದ.ಆಫ್ರಿಕಾ ಪರವಾಗಿ ಫಿಲ್ಯಾಂಡರ್ 3, ರಬಾಡಾ 3, ಸ್ಟೆಯ್ನ್ 2, ಮಾರ್ಕೆಲ್ 2 ವಿಕೆಟ್ ಪಡೆದರು.

Leave a Reply

Your email address will not be published.