Ashes Cricket : ಉಸ್ಮಾನ್ ಖವಾಜಾ ಅಮೋಘ ಶತಕ : ಮುನ್ನಡೆ ಸಾಧಿಸಿದ ಆಸೀಸ್

ಸಿಡ್ನಿಯಲ್ಲಿ ನಡೆಯುತ್ತಿರುವ 5ನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 479 ರನ್ ಕಲೆಹಾಕಿದೆ. ಈ ಮೂಲಕ ಆಸ್ಟ್ರೇಲಿಯಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 133 ರನ್ನುಗಳ ಮಹತ್ವದ ಮುನ್ನಡೆ ಪಡೆದುಕೊಂಡಿದೆ.

ಆಸ್ಟ್ರೇಲಿಯಾ ಪರವಾಗಿ ಅಮೋಘ ಶತಕ ಬಾರಿಸಿದ ಉಸ್ಮಾನ್ ಖವಾಜಾ 171 ರನ್ ಗಳಿಸಿದರು. ಅರ್ಧಶತಕ ಸಿಡಿಸಿರುವ ಆಸೀ ಬ್ಯಾಟ್ಸಮನ್ ಗಳಾದ ಶಾನ್ ಮಾರ್ಷ್ (98*) ಮಿಚೆಲ್ ಮಾರ್ಷ್ (63*) ಅಜೇಯರಾಗುಳಿದಿದ್ದಾರೆ. ಇಂಗ್ಲೆಂಡ್ ಪರವಾಗಿ 3ನೇ ದಿನದ ಆಟದಲ್ಲಿ ಮೇಸನ್ ಕ್ರೇನ್ ಹಾಗೂ ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com