‘ ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದೆ ‘ : ಬೆಳಗಾವಿಯಲ್ಲಿ ಅಣ್ಣಾ ಹಜಾರೆ ಕಳವಳ

ದೇಶದ ಪ್ರಜಾಪ್ರಭುತ್ವ ಆತಂಕದಲ್ಲಿದ್ದು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಬೆಳಗಾವಿಯಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಬೆಳಗಾವಿಯ ವ್ಯಾಕ್ಸ್ ಡಿಪೋ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅಣ್ಣಾ ಹಜಾರೆ ಮಾತನಾಡಿದರು.

ದೇಶದಲ್ಲಿ ಯಾವುದೇ ಕಾನೂನು ಜಾರಿ ಆಗಬೇಕು ಅಂದರೆ ಮೊದಲು ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಆಗಬೇಕು. ಆದರೇ ಈಗ ಯಾವುದೇ ಚರ್ಚೆಯಿಲ್ಲದೇ ಕಾನೂನು ರಚನೆಯಾಗುತ್ತಿದ್ದು ಇದರಿಂದ ಪ್ರಜಾಪ್ರಭುತ್ವ ಆತಂಕದಲ್ಲಿದೆ.

ಹೀಗೆ ಮಾಡಿದ್ರೆ ಇದು ಪ್ರಜಾಪ್ರಭುತ್ವ ಅಲ್ಲ ಪಾಳೆಗಾರಿಕೆ ಪದ್ಧತಿ ಆಗುತ್ತದೆ. ಸಮಾಜದ ಜಾಗೃತಿಗಾಗಿ ಮಾ.23ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶ ಮಾಡುತ್ತೇನೆ. ಇನ್ನೂ ದೇಶದಲ್ಲಿ ಬಿಳಿಯರು ಹೋಗಿ ಕಪ್ಪು ಜನ ಆಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published.