ದನ ಕಾಯ್ತಾ ಆಂಟಿ ಮೇಲೆ ಶುರುವಾಯ್ತು Love…ಮದುವೆಯಾಗ್ತೀನಿ ಎಂದ ಆತ ಮಾಡಿದ್ದೇ ಬೇರೆ ?

ಯಾದಗಿರಿ : ವಿಜಯಪುರದಲ್ಲಿ ದಾನಮ್ಮ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಯತ್ನ ನಡೆದಿದೆ.

ಸಂತ್ರಸ್ತೆ ಮೂಲತಃ ಯಾದಗಿರಿ ಮೂಲದವರೆಂದು ತಿಳಿದುಬಂದಿದೆ.ಆರೋಪಿಯನ್ನು ಕೋಯಿಲೂರ ಗ್ರಾಮದ ದೇವಪ್ಪ ಎಂದು ಗುರುತಿಸಲಾಗಿದೆ. ಈತ ದನ ಕಾಯಲು ಪ್ರತಿದಿನ ಹೋಗುತ್ತಿದ್ದ. ಈ ವೇಳೆ ಆಂಟಿ ಹಾಗೂ ಈತನ ಮಧ್ಯೆ ಪ್ರೀತಿ ಬೆಳೆದಿತ್ತು. ಸಂತ್ರಸ್ತೆಗ ಈಗಾಗಲೆ ಮದುವೆಯಾಗಿದ್ದು, 10 ವರ್ಷದ ಹಿಂದೆ ಗಂಡನಿಂದ ದೂರಾಗಿದ್ದರು. 6 ತಿಂಗಳಿನಿಂದ ಸಂತ್ರಸ್ತೆ ಹಾಗೂ ದೇವಪ್ಪ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಆತ ನಂಬಿಸಿದ್ದ.

ಸಂತ್ರಸ್ತೆ ವಯಸ್ಸಿನಲ್ಲಿ ದೊಡ್ಡವರು ಎಂಬ ಕಾರಣಕ್ಕೆ ದೇವಯ್ಯ ಮನೆಯಲ್ಲಿ ಮದುವೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಮನೆಬಿಟ್ಟು ಬೆಂಗಳೂರಿಗೆ ಬಂದಿದ್ದರು. ಜನವರಿ 2ರಂದು ದೇವಪ್ಪ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮಹಿಳೆಯ ಗುಪ್ತಾಂಗ ಹಾಗು ತೊಡೆ ಭಾಗಕ್ಕೆ ಬರೆ ಎಳೆದಿದ್ದು, ಕೊಲೆ ಯತ್ನ ನಡೆಸಿದ್ದಾರೆ. ಆದರೆ ಅವರಿಂದ ತಪ್ಪಿಸಿಕೊಂಡ ಮಹಿಳೆ ಈ ಬಗ್ಗೆ ಮಹಿಳೆ ತನ್ನ ಸಂಬಂಧಿಕರಿಗೆ ಮಾಹಿತಿ ನೀಡದ ಕೂಡಲೆ ಸಂಬಂಧಿಕರು ಆಕೆಯನ್ನ ಪುನಃ ಯಾದಗಿರಿಗೆ ಕರೆದೊಯ್ದಿದ್ದಾರೆ. ಪ್ರಕರಣ ಸಂಬಂಧ ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇವಪ್ಪನಿಗಾಗಿ ಬಲೆ ಬೀಸಿದ್ದಾರೆ.

 

Leave a Reply

Your email address will not be published.