Cricket – 1st Test : ದ.ಆಫ್ರಿಕಾ 286 ಕ್ಕೆ ಆಲೌಟ್ : ಭಾರತಕ್ಕೆ ಆರಂಭಿಕ ಆಘಾತ

ಕೇಪ್ ಟೌನ್ ನಲ್ಲಿ ಶುಕ್ರವಾರ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಭಾರತದ ಪರವಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ 286 ಕ್ಕೆ ಆಲೌಟ್ ಆಯಿತು. ಆತಿಥೇಯ ಬ್ಯಾಟ್ಸಮನ್ ಗಳಾದ ಎಬಿ ಡಿವಿಲಿಯರ್ಸ್ (65) ಹಾಗೂ ಫಾಫ್ ಡು ಪ್ಲೆಸಿಸ್ (62) ಅರ್ಧಶತಕ ಬಾರಿಸಿದರು.

ಭಾರತದ ಪರವಾಗಿ ಮಿಂಚಿನ ದಾಳಿ ನಡೆಸಿದ ವೇಗಿ ಭುವನೇಶ್ವರ್ ಕುಮಾರ್ 4, ಆರ್ ಅಶ್ವಿನ್ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಮಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ, ಆಫ್ರಿಕಾ ತಂಡದ ವೇಗಿಗಳು ಆರಂಭಿಕ ಆಘಾತ ನೀಡಿದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಸಂಕಷ್ಟದಲ್ಲಿದೆ. ಆರಂಭಿಕ ಬ್ಯಾಟ್ಸಮನ್ ಎಮ್ ವಿಜಯ್ (1) ಹಾಗೂ ನಾಯಕ ವಿರಾಟ್ ಕೊಹ್ಲಿ (5) ಎರಡಂಕಿಯನ್ನೂ ದಾಟದೇ ನಿರ್ಗಮಿಸಿದರು. ಚೇತೇಶ್ವರ ಪೂಜಾರಾ (5*) ರೋಹಿತ್ ಶರ್ಮಾ (0*) ಅಜೇಯರಾಗುಳಿದಿದ್ದಾರೆ.

 

Leave a Reply

Your email address will not be published.