ಯೋಗಿ ಆಡಳಿತದಲ್ಲಿ ಸರ್ವಂ ಕೇಸರಿ ಮಯಂ : ಉ.ಪ್ರ.ದಲ್ಲಿ ಕೇಸರೀಕರಣವಾಯ್ತು ಹಜ್‌ ಭವನ

ಲಖನೌ : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ತುಂಬ ಕೇಸರಿ ಬಣ್ಣ ಗೋಚರವಾಗತೊಡಗಿದೆ. ಇತ್ತೀಚೆಗಷ್ಟೇ ಸರ್ಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಸಿ, ಕೇಸರಿ ಬಸ್‌ ಬಿಟ್ಟ ಯೋಗಿ ಸರ್ಕಾರ ಈಗ ಲಖನೌದ ಹಜ್‌ ಭವನಕ್ಕೂ ಕೇಸರಿ ಬಣ್ಣ ಬಳಿಯಲಾಗಿದೆ.

ಈ ಹಜ್‌ ಭವನವು ಮೆಕ್ಕಾಗೆ ಹೋಗುವ ಪ್ರಯಾಣಿಕರ ದಾಖಲೆ ಪರಿಶೀಲನೆ, ಅವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆದರೆ ಯೋಗಿ ಸರ್ಕಾರ ಈ ಭವನಕ್ಕೂ ಕೇಸರಿಯ ಲೇಪ ಮಾಡಿದೆ.

ಕೇಸರಿ ಬಣ್ಣ, ಬಿಜೆಪಿ, ಭಜರಂಗದಳದಂತಹ ಸಂಘಟನೆಗಳು ಹೆಚ್ಚಾಗಿ ಬಳಸುವ ಬಣ್ಣವಾಗಿದ್ದು, ಹಜ್‌ ಭವನವನ್ನು ಕೇಸರೀಕರಣಗೊಳಿಸಿರುವುದಕ್ಕೆ ಅನೇಕ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಆದರೆ ಉತ್ತರ ಪ್ರದೇಶದ ಸಂಪುಟದಲ್ಲಿರುವ ಮುಸ್ಲಿಂ ಸಚಿವ ಮೋಹಿನ್‌ ರಾಜಾ ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೇಸರಿ ಶಕ್ತಿಯುತ ಹಾಗೂ ಪ್ರಕಾಶಮಾನವಾದ ಬಣ್ಣವಾಗಿದ್ದು, ಇದನ್ನು ಅನವಶ್ಯಕವಾಗಿ ವಿವಾದ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com