ರಾಖಿ ಸಾವಂತ್‌ ವಿರುದ್ಧ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ಹನಿಪ್ರೀತ್‌ ತಾಯಿ !

ಪಂಚಕುಲಂ ಹಿಂಸಾಚಾರ ಪ್ರಕರಣದಲ್ಲಿ ಗುರ್ಮಿತ್‌ ಬಾಬಾ ಹಾಗೂ ಆತನ ದತ್ತು ಪುತ್ರಿ ಹನಿಪ್ರೀತ್ ಬಂಧಿತರಾಗಿ ಜೈಲು ಕಂಬಿ ಎಣಿಸುತ್ತಿದ್ದಾರೆ. ಈಗ ಗುರ್ಮಿತ್ ಬಾಬಾ ಕುರಿತಂತೆ ಸಿನಿಮಾ ಮಾಡಲು ಮುದಾಗಿರುವ ರಾಖಿ ಸಾವಂತ್‌ ವಿರುದ್ಧ ಹನಿಪ್ರೀತ್ ತಾಯಿ ಆಶಾ ತನೇಜಾ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ನೋಟಿಸ್‌ ಕಳಿಸಿದ್ದಾರೆ.

ಗುರ್ಮಿತ್‌ ಹಾಗೂ ಹನಿಪ್ರೀತ್‌ ಬಂಧಿನಕ್ಕೊಳಗಾದ ವೇಳೆ ರಾಖಿ ಸಾವಂತ್ ಇವರ ಬಗ್ಗೆ ವಿಡಿಯೊವೊಂದರಲ್ಲಿ ಮಾತನಾಡಿದ್ದು, ನನಗೆ ಗುರ್ಮಿತ್ ಚೆನ್ನಾಗಿ ಗೊತ್ತು. ಅವರನ್ನು ಭೇಟಿಯಾಗಲು ಹೋದಾಗ ಎಲ್ಲಿ ನಾನು ಗುರ್ಮಿತ್‌ಗೆ ಆಪ್ತಳಾಗುತ್ತೇನೋ ಎಂದು ಹನಿಪ್ರೀತ್‌ ತನ್ನನ್ನು ತಡೆಯುತ್ತಿದ್ದರು ಎಂದು ರಾಖಿ ಹೇಳಿದ್ದರು. ಜೊತೆಗೆ ಇವರಿಬ್ಬರ ಕುರಿತಾದ ಸಿನಿಮಾವನ್ನೂ ರಾಖಿ ಸಾವಂತ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹನಿಪ್ರೀತ್‌ ತಾಯಿ ರಾಖಿ ಸಾವಂತ್‌ಗೆ ನೋಟಿಸ್‌ ಕಳಿಸಿದ್ದಾರೆ.

ನನ್ನ ಮಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದ ಕಾರಣ ರಾಖಿಗೆ ನೋಟಿಸ್‌ ನೀಡಿದ್ದೇನೆ. ಒಂದು ತಿಂಗಳಲ್ಲಿ ರಾಖಿ ಕ್ಷಮೆ ಕೇಳಬೇಕು. ಇವ್ಲವೇ 5 ಕೋಟಿ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published.