GST ಜಾರಿ ಬಳಿಕ ಮೊದಲ ಬಾರಿಗೆ ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ

ದೆಹಲಿ : 2018ನೇ ಸಾಲಿನ ಕೇಂದ್ರ ಬಜೆಟನ್ನು ಫೆಬ್ರವರಿ 1ರಂದು ಮಂಡಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌ ಹೆಗಡೆ ತಿಳಿಸಿದ್ದಾರೆ. ಬಜೆಟ್‌ ಅಧಿವೇಶನ ಜನವರಿ 29ರಿಂದ ಪ್ರಾರಂಭವಾಗಲಿದ್ದು. ಏಪ್ರಿಲ್‌ 6ರವರೆಗೆ ನಡೆಯಲಿದೆ ಎಂದಿದ್ದಾರೆ.

ಮೊದಲ ಹಂತದ ಬಜೆಟ್‌ ಅಧಿವೇಶನ ಜನವರಿ 29ರಿಂದ ಫೆಬ್ರವರಿ 9ರವರೆಗೆ, 2ನೇ ಹಂತದ ಅಧಿವೇಶನ ಮಾ.5ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ ಎಂದು ಸಚಿವ ಹೆಗಡೆ ಮಾಹಿತಿ ನೀಡಿದ್ದಾರೆ.

ಈ ಬಾರಿಯ ಹಣಕಾಸು ಬಜೆಟನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಲಿದ್ದಾರೆ. ಮೊದಲ ದಿನ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದು, ಅದೇ ದಿನ ಆರ್ಥಿಕ ಸಮೀಕ್ಷೆಯನ್ನೂ ಮಂಡಿಸಲಾಗುತ್ತದೆ. ಜಿಎಸ್‌ಟಿ ಬಳಿಕ ಮೊದಲ ಬಜೆಟ‌್ ಇದಾದ ಕಾರಣ ಹೆಚ್ಚಿನ ಮಹತ್ವ ಪಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com