Cricket – IPL 11 : ಕೊಹ್ಲಿಗೆ 17 ಕೋಟಿ ದಾಖಲೆಯ ಮೊತ್ತ, ಗೇಲ್ ಕೈ ಬಿಟ್ಟ RCB..?

ಇಂಡಿಯನ್ ಪ್ರಿಮಿಯರ್ ಲೀಗ್ ನ ಆಟಗಾರರ Retention ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ನಾಯಕ ವಿರಾಟ್ ಕೊಹ್ಲಿಯನ್ನು 17 ಕೋಟಿ ದಾಖಲೆಯ ಮೊತ್ತ ನೀಡಿ ರಿಟೇನ್ ಮಾಡಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬನಿಗೆ ದೊರೆತಿರುವ ಗರಿಷ್ಟ ಮೊತ್ತವಾಗಿದೆ. 2015 ರಲ್ಲಿ RCB ಯುವರಾಜ್ ಸಿಂಗ್ ಅವರನ್ನು 16 ಕೋಟಿ ನೀಡಿ ಖರೀದಿಸಿತ್ತು.

Image result for kohli gayle

ಕೊಹ್ಲಿ ಜೊತೆಗೆ, ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಜ್ ಖಾನ್ ಅವರನ್ನು ರಿಟೇನ್ ಮಾಡಿಕೊಂಡಿರುವ ಆರ್ ಸಿಬಿ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ರನ್ನು ಕೈಬಿಟ್ಟಿದೆ. RCB ಬಳಿ ಇನ್ನೂ ಎರಡು RTM ಕಾರ್ಡ್ ಗಳಿದ್ದು, ಜನೆವರಿ 25 ರಂದು ನಡೆಯಲಿರುವ ಹರಾಜಿನಲ್ಲಿ ಗೇಲ್ ರನ್ನು ಮರಳಿ ಪಡೆಕೊಳ್ಳಲಿದೆಯೇ ಅಥವಾ ಕೆ.ಎಲ್ ರಾಹುಲ್ & ಚಹಲ್ ಅವರಿಗೆ ಮಣೆ ಹಾಕುತ್ತದೆಯೋ ಕಾದು ನೋಡಬೇಕಿದೆ.

Image result for kohli gayle

ಪ್ರತಿಯೊಂದು ತಂಡಕ್ಕೆ 5 ಆಟಗಾರರನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. 3 ಆಟಗಾರರನ್ನು ನೇರವಾಗಿ Retain ಮಾಡಿಕೊಳ್ಳುವ ಹಕ್ಕು ಹಾಗೂ 3 RTM ಕಾರ್ಡ್ ಗಳನ್ನು ನೀಡಲಾಗಿದೆ. Right To Match ಕಾರ್ಡ್ ಅಂದರೆ, ಹರಾಜಿನಲ್ಲಿ ತನ್ನ ಆಟಗಾರರನ್ನು ಬೇರೆ ಫ್ರಾಂಚೈಸಿಗಳು ಖರೀದಿಸಿದರೆ, ಅದೇ ಬೆಲೆಯನ್ನು ನೀಡಿ ಆಟಗಾರರನ್ನು ತನ್ನಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com