Cricket ಆಡಲು ಭಾರತದೆದುರು ಭಿಕ್ಷೆ ಬೇಡುವ ಅಗತ್ಯವಿಲ್ಲ : PCB ಗೆ ಮಿಯಾಂದಾದ್ ಬುದ್ಧಿವಾದ

‘ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವಂತೆ ಭಾರತದ ಎದುರು ಭಿಕ್ಷೆ ಕೇಳಬೇಡಿ ‘ ಎಂದು ಪಾಕ್ ಮಾಜಿ ಕ್ರಿಕೆಟರ್ ಜಾವೆದ್ ಮಿಯಾಂದಾದ್ PCB (Pakistan Cricket Board) ಬುದ್ಧಿವಾದ ಹೇಳಿದ್ದಾರೆ.

‘ ಭಾರತ ನಮ್ಮೊಂದಿಗೆ ಕ್ರಿಕೆಟ್ ಆಡಲು ಬಯಸುವುದಿಲ್ಲ. ಅದು ಹಾಗೆಯೇ ಇರಲಿ ಬಿಡಿ. ಭಾರತದೊಂದಿಗೆ ಆಡದಿದ್ದರೆ ನಮ್ಮ ಕ್ರಿಕೆಟ್ ಸಾಯುವುದಿಲ್ಲ. ಭಾರತದೊಂದಿಗೆ ಆಡುವುದನ್ನು ಪಾಕಿಸ್ತಾನ ಮರೆತುಬಿಡಬೇಕು ‘ ಎಂದು ಹೇಳಿದ್ದಾರೆ.

‘ ಅವರು ನಮ್ಮೊಂದಿಗೆ 10 ವರ್ಷಗಳಿಂದ ಕ್ರಿಕೆಟ್ ಆಡಿಲ್ಲ, ಸೋ ವಾಟ್..? ಅದರಿಂದ ಪಾಕ್ ಕ್ರಿಕೆಟ್ ಗೆ ಏನಾದರೂ ನಷ್ಟವಾಗಿದೆಯೇ..? ನಾವು ಉತ್ತಮ ಪ್ರದರ್ಶನ ತೋರಿದ್ದೇವೆ. ಚಾಂಪಿಯನ್ಸ್ ಟ್ರೋಪಿ ಗೆಲುವು ಅದಕ್ಕೆ ಒಳ್ಳೆಯ ಉದಾಹರಣೆ. ಪಾಕ್ ಕ್ರಿಕೆಟ್ ಸಾಯವುದಿಲ್ಲ. 2009 ರಿಂದ ಪಾಕ್ ನೆಲದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಡೆಯದಿದ್ದರೂ ನಾವು ಉಳಿಸಿವಲ್ಲಿ ಯಶಸ್ವಿಯಾಗಿದ್ದೇವೆ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com