Ashes Cricket : ಇಂಗ್ಲೆಂಡ್ ಉತ್ತಮ ಮೊತ್ತ : ವಾರ್ನರ್, ಖವಾಜಾ ಅರ್ಧಶತಕ

ಸಿಡ್ನಿಯಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ, ಮೊದಲ ಇನ್ನಿಂಗ್ಸ್ ನಲ್ಲಿ 346 ಕ್ಕೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರವಾಗಿ ನಾಯಕ ಜೋ ರೂಟ್ 83 ಹಾಗೂ ಡೇವಿಡ್ ಮಲಾನ್ 62 ರನ್ ಗಳಿಸಿದರು.

ಆಸೀಸ್ ಪರವಾಗಿ ಪ್ಯಾಟ್ ಕಮಿನ್ಸ್ 4, ಮಿಚೆಲ್ ಸ್ಟಾರ್ಕ್ 2, ಜೊಶ್ ಹೇಜಲ್ವುಡ್ 2 ವಿಕೆಟ್ ಪಡೆದರು.ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿದೆ.

ಆರಂಭಿಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ 56 ರನ್ ಗಳಿಸಿದರು. ಅರ್ಧಶತಕ ಬಾರಿಸಿರುವ ಉಸ್ಮಾನ್ ಖವಾಜಾ (91*) ಹಾಗೂ ನಾಯಕ ಸ್ಟೀವ್ ಸ್ಮಿತ್ (44*) ಅಜೇಯರಾಗುಳಿದಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ 1 ವಿಕೆಟ್ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com