ಸಂವಿಧಾನ ಬದಲಿಸೋ ಮಾತನಾಡುವವರನ್ನು ಮೆಂಟಲ್‌ ಆಸ್ಪತ್ರೆಗೆ ಸೇರಿಸಬೇಕು : ಅಣ್ಣಾ ಹಜಾರೆ

ಬೆಳಗಾವಿ : ಸಂವಿಧಾನ ಬದಲಿಸುವ ಮಾತನಾಡುವವರನ್ನು ಆಸ್ಪತ್ರೆಗೆ ಸೇರಿಸಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ವಿರುದ್ದ ಗುಡುಗಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಭಾರತದ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಆಶಯಗಳ ಮೇಲೆ.
ಎಲ್ಲ ಸರ್ಕಾರಗಳು ಸರ್ಕಾರ ಸಂವಿಧಾನದ ಮೇಲೆ ನಡೆಯುತ್ತದೆ.ಸಂವಿಧಾನ ಬದಲಿಸುವ ಹೇಳಿಕೆ ನೀಡುವುದು ಸರಿಯಲ್ಲ. ಇದು ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅಣ್ಣಾ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಹೆಸರಲ್ಲಿ ನರೇಂದ್ರ ಮೋದಿ‌ ಜನರನ್ನ ಮರಳು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತೀರಿ. ಆದರೆ ರೈತರ ಸಾಲ ಮನ್ನಾ ಏಕೆ ಮಾಡುತ್ತಿಲ್ಲ. ಪ್ರತಿಯೊಬ್ಬನಿಗೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದ್ದಾಗ ಆತನಿಗೆ ಸರ್ಕಾರ ಜೀವಿಸುವ ಹಕ್ಕು ನೀಡಬೇಕು. ಕೇಂದ್ರ ಸರ್ಕಾರ ರೈತರಿಗಿಂತ ಉದ್ಯಮಪತಿಗಳ ಪರವಾಗಿದೆ. ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ ಒಂದೇ ಮಾತು ರೈತರ ಪರವಾಗಿ ಆಡಿಲ್ಲ. ಆಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಅವಕಾಶ ನೀಡಿ ಸುಮ್ಮನಿದ್ದೆ. ನಾನು ಇದುವರೆಗೆ ಹಲವು ಪತ್ರಗಳನ್ನ ಪ್ರಧಾನಿಗೆ ಬರೆದಿದ್ದೇನೆ. ಅವರಿಂದ ಯಾವುದೇ ಪತ್ರಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ನಾನು ಮತ್ತೆ ಹೋರಾಟಕ್ಕೆ ಧುಮುಕುತ್ತಿದ್ದೇನೆ. ಪ್ರಧಾನಿಗೆ ನಾನು ಬರೆದ ಪತ್ರಕ್ಕೆ ಉತ್ತರಿಸಲು ಸಮಯ ಇಲ್ಲ. ನಾನು ಸಾಮಾನ್ಯ ವ್ಯಕ್ತಿ ಹಾಗಾಗಿ ನನಗೆ ಬರೆದಿರಲ್ಲಿಕ್ಕಿಲ್ಲ ಅಂತಾ ಅನಿಸುತ್ತದೆ ಎಂದಿದ್ದಾರೆ.

ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿ ಲೋಕಾಯುಕ್ತ ಇರಲಿಲ್ಲ. ಆಗ ಲೋಕಾಯುಕ್ತ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಗುಜರಾತ್ ನಲ್ಲಿ 11ವರ್ಷದಿಂದ ಲೋಕಾಯುಕ್ತ ಜಾರಿಗೆ ಬಂದಿಲ್ಲ. ಇಂತವರು ಇಂದು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com