ತಾಕತ್ತಿದ್ದರೆ ಶ್ರೀರಾಮಸೇನೆಯನ್ನು ಬ್ಯಾನ್ ಮಾಡಲಿ ನೋಡೋಣ : CM ಗೆ ಮುತಾಲಿಕ್‌ ಚಾಲೆಂಜ್

ಬೆಂಗಳೂರು : ಸಿಎಂ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಶ್ರೀರಾಮಸೇನೆ ಸಂಘಟನೆಯನ್ನು ಬ್ಯಾನ್‌ ಮಾಡಲಿ ನೋಡೋಣ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಮುಸ್ಲಿಂ ಸಂಘಟನೆಗಳಾದ ಪಿಎಫ್‌ಐ. ಕೆಡಿಎಫ್‌ ಇವು ದೇಶದ್ರೋಹಿ ಸಂಘಟನೆಗಳು. ಅವುಗಳನ್ನು ಬ್ಯಾನ್‌ ಮಾಡಲಿ. ಹಿಂದೂ ಸಂಘಟನೆಗಳು ದೇಶದ್ರೋಹಿ ಸಂಘಟನೆಗಳಲ್ಲ. ಸರ್ಕಾರಕ್ಕೆ ತಾಕತ್ತಿದ್ದರೆ ನಿಷೇಧ ಮಾಡಲಿ. ಆಮೇಲೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಪಕ್ಷಗಳೆರಡೂ ಲಜ್ಜೆಗೆಟ್ಟ ಪಕ್ಷಗಳು. ಸಾವಿನಲ್ಲೂ ರಾಜಕೀಯ ಮಾಡುತ್ತಿವೆ. ಬಿಜೆಪಿಯವರದ್ದು ದ್ವಿಮುಖ ನೀತಿ. ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಿದ್ದಾಗ ಒಂದು ರೀತಿ ಆಡುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್ ಅಶೋಕ್‌ಗೆ ನಾನೇ ಹೇಳಿದ್ದೆ ಪಿಎಫ್‌ಐನ್ನು ಬ್ಯಾನ್‌ ಮಾಡಲು. ಆದರೆ ಆಗ ಬ್ಯಾನ್‌ ಮಾಡದೆ ಈಗ ನಾಟಕವಾಡುತ್ತಿದ್ದಾರೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com