ದೀಪಕ್‌ ಸಾವನ್ನೂ ಖಂಡಿಸುತ್ತಿದ್ದೇನೆ, ಆದರೆ ಯಾರೂ ಕೇಳಿಸಿಕೊಳ್ಳುತ್ತಿಲ್ಲ : ಪ್ರಕಾಶ್ ರೈ

ಬೆಂಗಳೂರು : ನಾನು ದೀಪಕ್‌ ಹತ್ಯೆಯನ್ನೂ ಖಂಡಿಸುತ್ತೇನೆ. ಆದರೆ ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ನಟ ಪ್ರಕಾಶ್‌ ರೈ ಹೇಳಿದ್ದಾರೆ.

ಕಾಟಿಪಳ್ಳಿಯ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಕುರಿತಂತೆ ಮಾತನಾಡಿರುವ ಪ್ರಕಾಶ್‌ ರೈ, ನಾನು ಯಾವುದಕ್ಕೂ ಸೀಮಿತವಲ್ಲ. ಮೊದಲು ನಾನು ಮನುಷ್ಯ. ದೀಪಕ್ ಹತ್ಯೆಯನ್ನೂ ನಾನು ಖಂಡಿಸುತ್ತೇನೆ. ಯಾವುದೇ ವಿಷಯವನ್ನು ಧರ್ಮ ಹಾಗೂ ಪಂಥದ ಹಿನ್ನೆಲೆಯಲ್ಲಿ ನೋಡುವ ಬದಲು ಒಬ್ಬ ಮನುಷ್ಯ ಎಂಬ ಭಾವನೆಯಲ್ಲಿ ನೋಡಬೇಕು. ಒಳ್ಳೆಯ ಕೆಲಸವನ್ನು ಯಾರೇ ಮಾಡಲಿ ಅವರ ಜೊತೆ ಸದಾ ನಾನು ಇರುತ್ತೇನೆ ಎಂದಿದ್ದಾರೆ.

ಮನುಷ್ಯರು ಮನುಷ್ಯರ ಜೊತೆಯೇ ಇರಬೇಕು. ಬಜರಂಗದಳದವರು ರಕ್ತದಾನ ಶಿಬಿರ ನಡೆಸಿ ನನ್ನನ್ನು ಕರೆದರೆ ಅದಕ್ಕೂ ಹೋಗುತ್ತೇನೆ. ಆದರೆ ಮೊದಲು ಅವರಿಗೆ ಕರೆಯಲು ಹೇಳಿ. ಸೈದ್ಧಾಂತಿಕ ವಿಚಾರಗಳು ಏನೇ ಇರಲಿ. ಒಳ್ಳೆಯ ಕೆಲಸವನ್ನು ಯಾರೇ ಮಾಡಲಿ. ಆಗ ಅವರ ಜೊತೆ ನಾನಿರುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com