ಸಿದ್ದರಾಮಯ್ಯನವ್ರೇ ನೀವು ಯಾವ ಟೈಮಲ್ಲಿ ಯಾರ ಕಾಲು ಹಿಡಿತಿದ್ರಿ ಅಂತ ನಂಗೊತ್ತು : HDK

ಬೆಂಗಳೂರು : ಅನ್ನ ಭಾಗ್ಯ ಇವರದ್ದಲ್ಲ. ಪುಕ್ಕಟೆ ಅಕ್ಕಿ ಕೊಡುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲೆಷ್ಟಿದೆ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದುಡಿಮೆ ಮೇಲೆ ಮತ ಕೇಳುವ ಕೆಪಾಸಿಟಿ ಕಾಂಗ್ರೆಸ್ಸಿಗಿಲ್ಲ. ಜಾತಿಗಳ ಮೇಲೆ ಮತ ಕೇಳ್ತಾರೆ. ಸಿಎಂ ಸಿದ್ದರಾಮಯ್ಯ ಪ್ರತಿ ಕಾರ್ಯಕ್ರಮದಲ್ಲಿ ಅವರಪ್ಪನ ಮೇಲೆ ಆಣೆ ಅವರು ಸರ್ಕಾರ ರಚಿಸಲ್ಲ ಅಂತ ಹೇಳ್ತಾರೆ. ನಮ್ಮಪ್ಪಂದಿರೇನು ಇವರಿಗೆ ಬಿಟ್ಟಿ ಸಿಕ್ಕಿದ್ದಾರಾ.. ಬೇಕಾದ್ರೆ ಸಿಎಂ ಅವರಪ್ಪನ ಮೇಲೆ ಆಣೆ ಹಾಕಿಕೊಳ್ಳಲಿ ಎಂದು ಗುಡುಗಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವ ಕಡಿಮೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬುದ್ದಿಮಾತು ಹೇಳಿದ ಎಚ್ಡಿಕೆ, ಬರುವ ಚುನಾವಣೆಯಲ್ಲಿ 113 ಸಿಟುಗಳನ್ನ ತಲುಪುವ ಗುರಿ ನಮ್ಮದಾಗಿದೆ ಎಂದಿದ್ದಾರೆ.  ಇನ್ನು ದೀಪಕ್‌ ಹತ್ಯೆ ಕುರಿತಂತೆ ಪ್ರತಿಕ್ರಿಯಿಸಿದ ಇವರು, ಎರಡು ಪಕ್ಷಗಳು ಈ ಪ್ರಕರಣವನ್ನ ಮುಂದಿಟ್ಕೊಂಡು ರಾಜಕೀಯ ಮಾಡ್ತಿದಾರೆ. ಸಮಾಜ ಘಾತುಕ ಶಕ್ತಿಗಳಿಗೆ ಇವರೇ ಪ್ರೋತ್ಸಾಹ ನೀಡ್ತಿದಾರೆ. ಕಾಂಗ್ರೆಸ್, ಬಿಜೆಪಿ ಎರಡು ಒಂದೆ ನಾಣ್ಯದ ಎರಡು ಮುಖಗಳು. ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೊಡಿಸಿದ್ರೆ ರಾಜ್ಯದ ರೈತನ 50 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಿಕ್ಕೆ ಆಗೋದಿಲ್ಲ. ಅದಕ್ಕಾಗಿನೇ ನಾವು 113ರ ಗುರಿ ಇಟ್ಕೊಂಡು ಹೋಗ್ತಿರುವುದಾಗಿ ಹೇಳಿದ್ದಾರೆ.

 

ನೀವು ಸಣ್ಣ ಪುಟ್ಟ ಪ್ರತಿಭಟನೆಗಳನ್ನ ಮಾಡಬೇಡಿ. ನಿಮ್ಮ ಪ್ರತಿಭಟನೆಗಳಿಂದ ಗೋಲಿಬಾರ್ ಗಳಾಗಬೇಕು ಅಂತ ಅಮೀತ್ ಶಾ ಹೇಳಿದ್ದಾರೆ ಅನ್ನೊ ಪ್ರತಾಪ್ ಸಿಂಹ ಹೇಳಿಕೆ ವೈರಲ್ ಆಗಿದೆ. ಇದೇ ಹೇಳಿಕೆಯನ್ನ ಸಾಮಾನ್ಯ ಪ್ರಜೆ ಹೇಳಿದ್ರೆ ಯಾವೆಲ್ಲ ಸೆಕ್ಷನ್ ಗಳನ್ನ ಹಾಕಿ ಒಳಗೆ ಹಾಕ್ತಿದ್ರು. ಈಗ್ಯಾಕೆ ಸುಮ್ಮನಿದ್ದೀರಿ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ನೀವು ಯಾವ ಯಾವ ಟೈಮಲ್ಲಿ ಯಾರ್ಯಾರ ಕಾಲ್ ಹಿಡಿತಿದ್ರಿ ಅನ್ನೊದು ನಂಗೆ ಗೊತ್ತಿದೆ. ಜೆಡಿಎಸ್ ಪಕ್ಷದಲ್ಲಿ ಡಿಸಿಎಂ ಆಗಿ ಕೆಲಸ ಮಾಡಿದ್ದಿರಿ, ಆಗ ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಂತ ಗೊತ್ತಿರಲಿಲ್ವಾ. ಬಹಳ ಹಗುರವಾಗಿ ಮಾತನಾಡಬೇಡಿ ಎಂದು ಸಿಎಂ ಗೆ ಹೆಚ್ಡಿಕೆ ಚಾಟಿ ಬೀಸಿದ್ದಾರೆ. ಇಲ್ಲಿವರೆಗೆ ಅಪಾರ್ಥರಿಗೆ ಅಧಿಕಾರ ಕೊಟ್ಟಿದ್ದಿರಿ. ಕುಮಾರಸ್ವಾಮಿ ಈ ರಾಜ್ಯವನ್ನ ಹಾಳು ಮಾಡ್ತಾರೆ ಅಂತಾನೇ ಜೆಡಿಎಸ್ ಗೆ ಅಧಿಕಾರ ಕೊಡಿ ಎಂದು ಹೆಚ್ಡಿಕೆ ಮನವಿ‌ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com