ಮುಂದಿನ ಬಾರಿ BSY ಸಿಎಂ ಆಗೋದು ಸೂರ್ಯ- ಚಂದ್ರರಷ್ಟೇ ಸತ್ಯ : ಶ್ರೀರಾಮುಲು

ಬಳ್ಳಾರಿ :2018ರ ಚುನಾವಣೆಯಲ್ಲಿ ಯಡಿಯೂರಪ್ಪನವರು ಸಿಎಂ ಆಗುವುದು ಸೂರ್ಯ, ಚಂದ್ರರಿರುವಷ್ಟೇ ಸತ್ಯ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸೋತಿದ್ದೇವೆ, ಸೋತರು ಜನರ ಜೊತೆ ಇದ್ದೇವೆ. ಆದರೆ ಕಾಂಗ್ರೆಸ್‌ನವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರೂ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಿಲ್ಲ. ಎರಡೂ ಬೆಳೆಗಳಿಗೆ ನೀರು ಕೊಡುವ ಕೆಲಸ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ್ರು. ಸೂರ್ಯ ಚಂದ್ರ ಎಷ್ಟು ಸತ್ಯನೋ, 2018 ರ ಚುನಾವಣೆಯಲ್ಲಿ ಬಿಎಸ್ವೈ ಸಿಎಂ ಆಗೋದು ಅಷ್ಟೆ ಸತ್ಯ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ದ ಗುಡುಗಿದ ಅವರು, ಬಳ್ಳಾರಿ ಜಿಲ್ಲಾ ಮಂತ್ರಿ ಸಂತೋಷ್ ಲಾಡ್, ಸೋಗಲಾಡಿ ನಗರ ಶಾಸಕ ಅನಿಲ್ ಲಾಡ್, ಗ್ರಾಮೀಣ ಶಾಸಕ ಗೋಪಾಲಕೃಷ್ಣ ಬರಿ ತೆಂಗಿನಕಾಯಿ ಒಡೆಯುವ ಕೆಲಸ ಮಾಡ್ತಿದ್ದಾರೆ. ಬಳ್ಳಾರಿ ಅಭಿವೃದ್ಧಿ ಮಾಡಲು ಅನುದಾನವನ್ನು ನಾವು ತಂದಿದ್ದೇವೆ. ಹೊರಗಿನವರಿಗೆ ಮತ ಹಾಕಬೇಡಿ, ಸ್ಥಳೀಯರಿಗೆ ಮತ ಹಾಕಿ ಎಂದು ಸಂಸದ ಶ್ರೀರಾಮುಲು ಮನವಿ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com