ನನ್ನ ಜನರ ಮಧ್ಯೆ ಇರುವುದು ಭಕ್ತ ಹಾಗೂ ಭಗವಂತನ ಸಂಬಂಧ : D.K ಶಿವಕುಮಾರ್
ತುಮಕೂರು : ಚೆನ್ನಪಟ್ಟಣದಲ್ಲಿ ನಾನು ರಾಜಕೀಯ ಮದುವೆಯಾಗಿದ್ದೇನೆ. ಅವನಂತೆ ಮದುವೆಯಲ್ಲ, ರಾಜಕೀಯ ಬದ್ದತೆ ನನ್ನದು ಎಂದು ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಮುಖಂಡ ಯೋಗೇಶ್ವರ್ ವಿರುದ್ದ ತಿರುಗೇಟು ನೀಡಿದ್ದಾರೆ.
ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಚನ್ನಪಟ್ಟಣದ ಒಂದು ಹೋಬಳಿಯ ಜನ ನನ್ನನ್ನು ನಾಲ್ಕು ಬಾರಿ ಆರಿಸಿದ್ದಾರೆ. ಹಾಗಾಗಿ ಅಲ್ಲಿಯ ಜನರ ನಡುವೆ ಬಾಂಧವ್ಯ ಇದೆ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ ನಮ್ಮದು. ಪೊರಕೆ ಏಟು ತಿಂತೀನಿ. ಅವರು ಯಾವಾಗ ಬೇಕಾದರೂ ಹೊಡೆಯಲಿ, ಹೊಡೆಸಿಕೊಳ್ಳಲು ಸಿದ್ದ ಎಂದಿದ್ದಾರೆ.
ಜೊತೆಗೆ ಚೆನ್ನಪಟ್ಟಣದಲ್ಲಿ ಯೋಗೇಶ್ವರ್ ಮೊದಲು ಗೆಲ್ಲಲಿ, ಬಳಿಕ ನನ್ನ ವಿರುದ್ದ ಸಾಮಾನ್ಯರನ್ನು ನಿಲ್ಲಿಸಲಿ. ದಲಿತರ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಮೊದಲು ಅವರು ಸಾಬೀತು ಮಾಡಲಿ, ಸಾಕ್ಷಿ ತೋರಿಸಿ ಆಮೇಲೆ ಕೇಸ್ ಹಾಕಲಿ. ನಮ್ಮ ಯೋಗೀಶಣ್ಣ ದೊಡ್ಡ ಸಿನಿಮಾ ನಟರು ಎಂದು ವ್ಯಂಗ್ಯ ಮಾಡಿದ್ದಾರೆ.